ADVERTISEMENT

ಏರ್‌ ಆಂಬುಲೆನ್ಸ್‌ ಸೇವೆಗೆ ಸಿಎಂ ಚಾಲನೆ

ಏಜೆನ್ಸೀಸ್
Published 16 ಡಿಸೆಂಬರ್ 2016, 11:17 IST
Last Updated 16 ಡಿಸೆಂಬರ್ 2016, 11:17 IST
ಏರ್‌ ಆಂಬುಲೆನ್ಸ್‌ ಸೇವೆಗೆ ಸಿಎಂ ಚಾಲನೆ
ಏರ್‌ ಆಂಬುಲೆನ್ಸ್‌ ಸೇವೆಗೆ ಸಿಎಂ ಚಾಲನೆ   

ಬೆಂಗಳೂರು: ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ವಾಯು ಮಾರ್ಗದ ಮೂಲಕ ಆಸ್ಪತ್ರೆಗೆ ರವಾನಿಸುವ ಏರ್‌ ಆಂಬುಲೆನ್ಸ್‌ ಸೇವೆಗೆ ಬೆಂಗಳೂರಿನ ಎಚ್‌‌ಎಎಲ್ ವಿಮಾನನಿಲ್ದಾಣದಲ್ಲಿ ಏವಿಯೇಟರ್ಸ್‌ ಏರ್‌ ರೆಸ್ಕ್ಯೂ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಏರ್‌ ಆಂಬುಲೆನ್ಸ್‌ಗೆ ಪೂಜೆ ಸಲ್ಲಿಸುವ ಮೂಲಕ ಈ ಸೇವೆಯನ್ನು ಸಿಎಂ ಉದ್ಘಾಟಿಸಿದರು. ಬಳಿಕ, ಏರ್‌ ಆಂಬುಲೆನ್ಸ್‌ನಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು.

ಎಚ್‌ಎಎಲ್ ವಿಮಾನನಿಲ್ದಾಣದಲ್ಲಿ ಏವಿಯೇಟರ್ಸ್ ಏರ್ ರೆಸ್ಕ್ಯೂ ಸಂಸ್ಥೆ ಸಹಯೋಗದೊಂದಿಗೆ ಖಾಸಗಿ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಇಂದು ಉದ್ಘಾಟನೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.