ಬೆಂಗಳೂರು: ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂಬಿ) ವತಿಯಿಂದ ಜ. 24ರಂದು ‘ಪ್ರಯಾಸ್ ದಿನ’ ಆಚರಿಸಲಾಗುತ್ತದೆ.
ಈ ದಿನಾಚರಣೆ ಅಂಗವಾಗಿ ಅಂಗವಿಕಲರ ಪ್ರತಿಭೆ ಅನಾವರಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಐಐಎಂಬಿಯ ಸ್ನಾತಕೋತ್ತರ ಪದವಿ ಕೋರ್ಸ್‌ನ ವಿದ್ಯಾರ್ಥಿಗಳು 2009ರಲ್ಲಿ ಮೊದಲ ಬಾರಿಗೆ ‘ಪ್ರಯಾಸ್ ದಿನ’ ಸಂಘಟಿಸಿದ್ದರು. ಅಲ್ಲದೆ, ಅಂಗವಿಕಲರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿದ್ದರು. ಕೃತಕ ಕಾಲು ಜೋಡಣೆ, ನೇತ್ರ ಶಸ್ತ್ರಚಿಕಿತ್ಸೆ ಅವುಗಳಲ್ಲಿ ಮುಖ್ಯವಾದುವು.
ಆಗಿನಿಂದಲೂ ಇದು ಐಐಎಂಬಿಯ ವಾರ್ಷಿಕ ಕಾರ್ಯಕ್ರಮದ ಭಾಗವಾಗಿದೆ. ಈ ಸಲದ ದಿನಾಚರಣೆಯಲ್ಲಿ ಬೆನ್ನುಮೂಳೆ ಗಾಯದ ಕುರಿತು ಜಾಗೃತಿ ಕಾರ್ಯಕ್ರಮವನ್ನೂ ಸಂಘಟಿಸಲಾಗಿದೆ. ಜಾಗೃತಿ ಓಟವೂ ನಡೆಯಲಿದೆ. ಅಂಗವಿಕಲ ಅಥ್ಲೀಟ್ ಮಾಲತಿ ಹೊಳ್ಳ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.