ADVERTISEMENT

ಐಟಿಐ ದತ್ತಾಂಶ ಕೇಂದ್ರ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಎಸ್.ಗೋಪು ಉದ್ಘಾಟಿಸಿದರು. ನಿರ್ದೇಶಕ ಕೆ.ಅಳಗೇಶನ್, ಮಾರುಕಟ್ಟೆ ವಿಭಾಗದ ಎಂ.ಆರ್.ಅಗರವಾಲ್ ಇದ್ದರು
ಎಸ್.ಗೋಪು ಉದ್ಘಾಟಿಸಿದರು. ನಿರ್ದೇಶಕ ಕೆ.ಅಳಗೇಶನ್, ಮಾರುಕಟ್ಟೆ ವಿಭಾಗದ ಎಂ.ಆರ್.ಅಗರವಾಲ್ ಇದ್ದರು   

ಬೆಂಗಳೂರು: ದೇಶದ ಪ್ರಮುಖ ಟೆಲಿಕಾಂ ತಯಾರಿಕಾ ಕಂಪನಿಯಾದ ಐಟಿಐ, ಬೆಂಗಳೂರಿನ ಘಟಕದಲ್ಲಿ ಈಗಿರುವ ವ್ಯವಸ್ಥೆಗೆ 1,000 ಹೆಚ್ಚುವರಿ ರ‍್ಯಾಕ್‌ಗಳನ್ನು ಸೇರಿಸುವ ಮೂಲಕ ತನ್ನ ದತ್ತಾಂಶ ಕೇಂದ್ರದ ವಿಸ್ತರಣೆಯನ್ನು ಪ್ರಕಟಿಸಿತು. ಇದರ ಜೊತೆಗೆ, ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ 200 ರ‍್ಯಾಕ್ ಸಾಮರ್ಥ್ಯದ ನೂತನ ದತ್ತಾಂಶ ಕೇಂದ್ರ ಆರಂಭಿಸಿತು.

ನೂತನ ಮೂಲಸೌಕರ್ಯವು ಸಾರ್ವಜನಿಕ ಕ್ಷೇತ್ರದ ಘಟಕಗಳ ಬ್ಯಾಂಕ್‌ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಬೃಹತ್ ಉದ್ದಿಮೆಗಳು ತಮ್ಮ ದತ್ತಾಂಶ ಶೇಖರಿಸಲು ಅನುವು ಮಾಡಿಕೊಡುತ್ತದೆ.

ಐಟಿಐ ಲಿಮಿಟೆಡ್‌ ಅಧ್ಯಕ್ಷ ಎಸ್. ಗೋಪು, ‘10 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು, ಕಾರ್ಪೊರೇಟ್ ಹಾಗೂ ಸರ್ಕಾರಿ ಸಂಸ್ಥೆಗಳಂಥ ಪ್ರಮುಖ ಗ್ರಾಹಕರಿಗೆ ಐಟಿಐ ದತ್ತಾಂಶ ಕೇಂದ್ರ ಸೌಲಭ್ಯವನ್ನು ಒದಗಿಸುತ್ತಾ ಬಂದಿದೆ’ ಎಂದರು.

ADVERTISEMENT

ಉತ್ಪಾದನೆ ಮತ್ತು ಮಾನವ ಸಂಪನ್ಮೂಲ ವಿಭಾಗದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.