ADVERTISEMENT

ಒತ್ತುವರಿ: ಮಾಹಿತಿ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:44 IST
Last Updated 8 ಡಿಸೆಂಬರ್ 2013, 19:44 IST
ಕೃಷ್ಣರಾಜಪುರ ಹಿರಿಯನಾಗರಿಕ ವೇದಿಕೆ ವತಿಯಿಂದ ಬಸವನಪುರ ಅಮರ ಜ್ಯೋತಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಚಾರ ನಿಯಂತ್ರಕ ಇನ್ಸ್‌­ಪೆಕ್ಟರ್‌ ಸಂಜೀವ ರಾಯಪ್ಪ, ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಎಂ.ಎಲ್‌ ಮುನಿಕೃಷ್ಣಪ್ಪ ,ತಹಸೀಲ್ದಾರ್‌ ಬಿ.ಆರ್‌.­ಹರೀಶ್‌ ನಾಯ್ಕ , ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡಯ್ಯ, ಸಮಾಜ ಕಲ್ಯಾಣ ಅಧಿಕಾರಿ ಸಿಂಧೂ ಭಾಗವಹಿಸಿದ್ದರು

ಕೃಷ್ಣರಾಜಪುರ : ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕೊರತೆ ಇದ್ದು ದೂಳು ತುಂಬಿದ ರಸ್ತೆ, ರಸ್ತೆಗಳನ್ನು ಸಮತಟ್ಟು ಮಾಡುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿಸಿದ ಮಟ್ಟದಲ್ಲಿ ನಡೆದಿಲ್ಲ ಎಂದು ತಹಶೀ­ಲ್ದಾರ್‌ ಬಿ.ಆರ್‌.ಹರೀಶ್‌ ನಾಯ್ಕ ಅಸಮಾ­ಧಾನ ವ್ಯಕ್ತಪಡಿಸಿದರು.

ಕೆ.ಆರ್‌.ಪುರ ಹಿರಿಯರ ವೇದಿಕೆ ಬಸವನಪುರ ಅಮರ ಜ್ಯೋತಿ ಕಾಲೆಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯ­ಕ್ರಮ­ದಲ್ಲಿ ಮಾತನಾಡಿದರು.

ಸ್ಥಳೀಯರು ಅಧಿಕಾರಿಗಳಿಗೆ ಸಹ­ಕಾರ ನೀಡಬೇಕು. ಸರ್ಕಾರಿ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಮಾಹಿತಿ ನೀಡ­ಬೇಕು ಎಂದು ತಿಳಿಸಿದರು.

ವಾರಕೊಮ್ಮೆ ನೀರು ಪೂರೈಕೆ­ಯಾಗು­ತ್ತಿದ್ದರೂ, ಸಾವಿ­ರಾರು ರೂಪಾಯಿ ವಿದ್ಯುತ್‌ ಬಿಲ್‌ ಪಾವತಿಸ­ಬೇಕಾಗಿದೆ. ಹೀಗಾಗಿ ಅನಧಿಕೃತ ನೀರು ಪೂರೈಕೆ ಸಂಪರ್ಕವನ್ನು ಸಮಾರೋ­ಪಾ­ದಿಯಲ್ಲಿ ಕಡಿತಗೊಳಿಸಲು ಎರಡು ಜಾಗೃತ­ದಳ­ಗಳನ್ನು ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.