ಬೆಂಗಳೂರು: ತೋಟಗಾರಿಕೆ ಇಲಾಖೆಯು ಕಬ್ಬನ್ ಉದ್ಯಾನದಲ್ಲಿ ಬಿದಿರಿನ ಬೊಂಬು ಕಡಿಯುತ್ತಿರುವುದಕ್ಕೆ ಕಬ್ಬನ್ ಉದ್ಯಾನ ನಡಿಗೆದಾರರ ಸಂಘವು ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿದ ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್, ‘ಕಬ್ಬನ್ ಉದ್ಯಾನದಲ್ಲಿ ಬಿದಿರು ಬೊಂಬು ಕಡಿಯುವ ಬಗ್ಗೆ ಉದ್ಯಾನದ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಕಡಿದಿರುವ ಬಿದಿರು ಬೊಂಬು ಏನು ಮಾಡುತ್ತಾರೆ ಎಂಬ ವಿಷಯವನ್ನೂ ಗೌಪ್ಯ ವಾಗಿಡಲಾಗಿದೆ’ ಎಂದು ದೂರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ‘ಪ್ರತಿ ವರ್ಷದ ಬೇಸಿಗೆ ವೇಳೆಯಲ್ಲಿ ಬಿದಿರಿನ ಒಣ ಬೊಂಬುಗಳನ್ನು ಕಡಿಯಲಾಗುತ್ತದೆ. ಈ ವರ್ಷವೂ ಟೆಂಡರ್ ಕರೆಯಲಾಗಿದೆ. ಇದಕ್ಕೆ ತೋಟಗಾರಿಕೆ ಇಲಾಖೆಯ ನಿರ್ದೇಶಕರಿಂದಲೂ ಅನುಮೋದನೆ ಪಡೆದಿದೆ’ ಎಂದರು.
‘ಬಿದಿರು ಬೊಂಬು ಕಡಿಯುವಾಗ ಲಾಲ್‌ಬಾಗ್‌ನ ಸಿಬ್ಬಂದಿ ಸ್ಥಳದಲ್ಲಿ ಇರುತ್ತಾರೆ. ಇಲಾಖೆಯ ಪ್ರತಿಯೊಂದು ವಿಷಯವನ್ನೂ ನಡಿಗೆದಾರರ ಸಂಘಕ್ಕೆ ತಿಳಿಸಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.