ADVERTISEMENT

ಕರಡಚ್ಚು ತಿದ್ದುವ ಕಮ್ಮಟ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಾಣ–ಜಾಣೆಯರ ಬಳಗದ ಆಶ್ರಯದಲ್ಲಿ ಪೀಣ್ಯದಾಸರಹಳ್ಳಿ ಸಮೀಪದ ಕಮ್ಮಗೊಂಡನಹಳ್ಳಿಯ ಎಂ.ಎನ್. ಪದವಿ ಕಾಲೇಜಿನಲ್ಲಿ ‘ಕರಡಚ್ಚು ತಿದ್ದುವ ಕಮ್ಮಟ’ ಜರುಗಿತು.

‘ಈ ಹಿಂದೆ ಅಚ್ಚು ಮೊಳೆಗಳನ್ನು ಜೋಡಿಸುವ ಮೂಲಕ ಮುದ್ರಿಸುವ ವ್ಯವಸ್ಥೆ ಇತ್ತು. ಆದರೆ, ಈಗ ಕಂಪ್ಯೂಟರ್‌ ಯುಗವಾಗಿದ್ದು, ಮುದ್ರಣ ಬಹಳ ಸುಲಭವಾಗಿದೆ’ ಎಂದು ಸಂಪನ್ಮೂಲ ವ್ಯಕ್ತಿ ಜಿ.ರಾಮಚಂದ್ರ ತಿಳಿಸಿದರು.

ಮಹಾನುಭಾವಿ ಪ್ರಕಾಶನದ ಕೆ.ಜಿ.ಮಹಾನುಭಾವಿ ಮಠ, ‘ಮುದ್ರಣ ಮತ್ತು ಕರಡಚ್ಚು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೈಬರಹ ಅಥವಾ ಮುದ್ರಿತ ಬರಹದಲ್ಲಿ ಆಗಿರುವ ತಪ್ಪುಗಳನ್ನು ತಿದ್ದುವುದೂ ಒಂದು ಕಲೆ’ ಎಂದರು.

ADVERTISEMENT

ಪುಸ್ತಕ ಪ್ರಾಧಿಕಾರದ ಸದಸ್ಯ ದ್ವಾರನಕುಂಟೆ ಪಾತಣ್ಣ, ‘ಲೇಖಕರು, ಓದುಗರು ಹಾಗೂ ಮಾರಾಟಗಾರರ ನಡುವೆ ಕೊಂಡಿಯಂತೆ ಪುಸ್ತಕ ಪ್ರಾಧಿಕಾರವು ಕೆಲಸ ಮಾಡುತ್ತಿದೆ. ಪ್ರಕಾಶಕರಿಗೆ ಬೆಂಬಲ ನೀಡುವುದು, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವುದು ಪ್ರಾಧಿಕಾರದ ಮುಖ್ಯ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.