ADVERTISEMENT

ಕಲಾವಿದರ ಕ್ಯಾಲೆಂಡರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 20:24 IST
Last Updated 11 ಜನವರಿ 2014, 20:24 IST
ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ‘ಮಾಸ್ಟರ್ ಕಿಚನ್ ಅಪ್ಲಯನ್ಸಸ್‌’ನ  ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಬನ್ಸಾಲಿ ಅವರು ವಿನೂತನವಾದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕಲಾವಿದರಾದ ಟಿ.ವಿ.ಶಂಕರ್‌, ಎಸ್‌ ಉಮಾ ಮತ್ತಿತರರು ಚಿತ್ರದಲ್ಲಿದ್ದಾರೆ.
ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ‘ಮಾಸ್ಟರ್ ಕಿಚನ್ ಅಪ್ಲಯನ್ಸಸ್‌’ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಬನ್ಸಾಲಿ ಅವರು ವಿನೂತನವಾದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕಲಾವಿದರಾದ ಟಿ.ವಿ.ಶಂಕರ್‌, ಎಸ್‌ ಉಮಾ ಮತ್ತಿತರರು ಚಿತ್ರದಲ್ಲಿದ್ದಾರೆ.   

ಬೆಂಗಳೂರು: ಶಿಲ್ಪದಲ್ಲಿ ಕೆತ್ತಿದಂತಿರುವ ಗಣಪತಿ, ನೀರನ್ನು ಸುರಿಯುತ್ತಿರುವ ಮಹಿಳೆ, ಶೃಂಗಾರದ ರಸಗಳಿಗೆಯಲ್ಲಿ ಮೈಮರೆತಿರುವ ಯುವತಿ,  ಸ್ನಿಗ್ಧತೆಯನ್ನು ತೋರುತ್ತಿರುವ ಬುದ್ಧ, ಕೃಷ್ಣನ ಕೊಳಲವಾದನವನ್ನು ಆಲಿಸುತ್ತಾ ಮೈಮರೆತಿರುವ ರಾಧೆ–

ಹೀಗೆ   ಅನೇಕ ಸುಂದರ ಕಲಾಕೃತಿ­ಗಳನ್ನು ಬಳಸಿ ತಯಾರಿಸಿರುವ  ಕ್ಯಾಲೆಂಡರ್‌ ಅನ್ನು ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ‘ಮಾಸ್ಟರ್ ಕಿಚನ್ ಅಪ್ಲಯನ್ಸಸ್‌’ ಹೊರ ತಂದಿದೆ.

ನಗರದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಬನ್ಸಾಲಿ, ‘ಪ್ರತಿಭಾವಂತ ಕಲಾವಿದರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಈ ಕ್ಯಾಲೆಂಡರ್‌ ಹೊರತಂದಿದ್ದೇವೆ’ ಎಂದರು.

‘ಹಲವಾರು ವರ್ಷಗಳ ಪರಿಶ್ರಮ­ದಿಂದ ಚಿತ್ರಕಲೆಯನ್ನು ಕಲಿತಿರುವ ಹಲವಾರು ಕಲಾವಿದರುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ದೊರೆತಿರುವುದಿಲ್ಲ. ಆರ್ಥಿಕ ಸಂಕಷ್ಟ ಹಾಗೂ ಜೀವನ ನಿರ್ವಹಣೆಯ ಕಷ್ಟ ಹಲವರನ್ನು ಚಿತ್ರಕಲೆಯನ್ನು ಬಿಟ್ಟು ಬೇರೆ ಬೇರೆ ಉದ್ಯೋಗ ಅರಸಿಕೊಳ್ಳುವ ಅನಿವಾರ್ಯತೆಗೆ ದೂಡುತ್ತದೆ’ ಎಂದು ಅವರು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.