ADVERTISEMENT

ಕಲೆಯ ಉಳಿವಿಗೆ ಎಲ್ಲ ನೆರವು ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:45 IST
Last Updated 22 ಜನವರಿ 2012, 19:45 IST

ನೆಲಮಂಗಲ:  ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಸಂಘ- ಸಂಸ್ಥೆಗಳ ಸಹಕಾರದ ಜತೆಗೆ, ಶಿಬಿರಗಳ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ದಿವ್ಯ ಜ್ಯೋತಿ ವಿದ್ಯಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ `ಜನಪದ ಸಂಗೀತ ಮತ್ತು ನೃತ್ಯ ತರಬೇತಿ ಶಿಬಿರ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ದಿವ್ಯಜ್ಯೋತಿ ವಿದ್ಯಾ ಕೇಂದ್ರದ ಅಧ್ಯಕ್ಷ ಎಲ್.ಕೃಷ್ಣಮೂರ್ತಿ, `ವಿದ್ಯಾರ್ಥಿಗಳು ಜನಪದ ಸಾಹಿತ್ಯದ ಕಡೆ ಒಲವು ಬೆಳೆಸಿಕೊಳ್ಳಬೇಕು~ ಎಂದರು.

ಹಿರಿಯ ಕಲಾವಿದೆ, ಭವಾನಿ ವಿದ್ಯಾಪೀಠದ ಅಧ್ಯಕ್ಷೆ ಸುಶೀಲಮ್ಮ, ಸಂತ ಶಿಶುನಾಳ ಷರೀಫ ಪ್ರಶಸ್ತಿ ವಿಜೇತ ಟಿ.ವಿ.ರಾಜು, ಜನಪದ ಸಂಗೀತ ಕಲಾವಿದ ಶಿಬಿರದ ನಿರ್ದೇಶಕ ವಿ.ರಾಮಚಂದ್ರ ಇದ್ದರು. ಶಿಬಿರದ ಸಂಚಾಲಕ ಅಪ್ಪಾ ಸಾಹೇಬ್ ಗಾಣೆಗೇರ್ ಶಿಬಿರದ ಉದ್ದೇಶಗಳನ್ನು ವಿವರಿಸಿದರು. ಎಸ್.ಬಿ.ಹನುಮಂತರಾಯಪ್ಪ ಮತ್ತು ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ವೆಂಕಟೇಶ್ ಚೌಥಾಯ್ ನಿರೂಪಿಸಿ, ರೇಣುಕಮ್ಮ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.