ADVERTISEMENT

‘ಕಸಾಪ ಅಧಿಕಾರಾವಧಿ: ಸಾಹಿತಿಗಳ ಮೌನವೇಕೆ?’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:51 IST
Last Updated 4 ಏಪ್ರಿಲ್ 2018, 19:51 IST
ಕನ್ನಡ ಸಾಹಿತ್ಯ ಪರಿಷತ್‌ನ ಕುವೇಂಪು ಸಭಾಂಗಣದಲ್ಲಿ ಬುಧವಾರ ಬಹುಜನ ಕನ್ನಡಿಗರು 21ನೇ ವಾರ್ಷಿಕೋತ್ಸವ ವರ್ಷದ ಮೊದಲ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ವಿಜಯ ಸಂಚಿಕೆ ಬಿಡುಗಡೆ ಮಾಡಿದರು. ಡಾ.ಮಹೇಶ್‌ ಜೋಶಿ,ಕೋಡಿಹೊಸಹಳ್ಳಿ ರಾಮಣ್ಣ ಇದ್ದರು–ಪ್ರಜಾವಾಣಿ ಚಿತ್ರ
ಕನ್ನಡ ಸಾಹಿತ್ಯ ಪರಿಷತ್‌ನ ಕುವೇಂಪು ಸಭಾಂಗಣದಲ್ಲಿ ಬುಧವಾರ ಬಹುಜನ ಕನ್ನಡಿಗರು 21ನೇ ವಾರ್ಷಿಕೋತ್ಸವ ವರ್ಷದ ಮೊದಲ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ವಿಜಯ ಸಂಚಿಕೆ ಬಿಡುಗಡೆ ಮಾಡಿದರು. ಡಾ.ಮಹೇಶ್‌ ಜೋಶಿ,ಕೋಡಿಹೊಸಹಳ್ಳಿ ರಾಮಣ್ಣ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪರಿಷತ್ತಿನ ಸದಸ್ಯರು ನಿಮ್ಮನ್ನು ಆಯ್ಕೆ ಮಾಡಿರುವುದು ಮೂರು ವರ್ಷದ ಅವಧಿಗೆ ಮಾತ್ರ. ಈ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ಹೊರಗಡೆ ಬನ್ನಿ. ಈ ಬಗ್ಗೆ ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರೂ, ಸಾಹಿತ್ಯ ವಲಯ ಮೌನವಾಗಿರುವುದು ಆಶ್ಚರ್ಯ ಉಂಟುಮಾಡಿದೆ’ ಎಂದು ಲೇಖಕಿ ಡಾ. ವಿಜಯಾ ಹೇಳಿದರು.

ಬಹುಜನ ಕನ್ನಡಿಗರ ಪತ್ರಿಕಾ ಬಳಗ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಹೀಗೆ ಸುಮ್ಮನಿರುವುದಕ್ಕೆ ಪರಿಷತ್ತು ನೀಡುವ ನೃಪತುಂಗ ಪ್ರಶಸ್ತಿ ಕಾರಣವೋ ಅಥವಾ ಅಸಾಹಿತ್ಯ ವಾತಾವರಣದಿಂದ ಬೇಸತ್ತು ಸುಮ್ಮನಿದ್ದಾರೋ ತಿಳಿಯದು.
ಮಹನಿಯರು ಕಟ್ಟಿ ಬೆಳೆಸಿದ ಪರಿಷತ್ತಿನ ಇಂದಿನ ಸ್ಥಿತಿ ಬೇಸರ ತಂದಿದೆ. ಇಲ್ಲಿ ಮತ್ತೆ ಸಾಹಿತ್ಯದ ವಾತಾವರಣ ನಿರ್ಮಿಸುವ ಕೆಲಸ ಆಗಬೇಕು ಎಂದು ಹೇಳಿದರು.ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ‘ಕಸಾಪ ಅಧಿಕಾರವಧಿ ವಿಸ್ತರಣೆ ವಿಚಾರದಲ್ಲಿ ಬಂಡಾಯ ಸಾಹಿತಿಗಳು ಸೇರಿದಂತೆ ದೊಡ್ಡ ಸಾಹಿತಿಗಳು ಬಾಯಿಮುಚ್ಚಿ ಕುಳಿತಿದ್ದಾರೆ. ಕಸಾಪದಲ್ಲಿ ಇಂದು ಬೌದ್ಧಿಕ ದಾರಿದ್ರ್ಯ ತುಂಬಿದೆ. ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿದರೆ ಪ್ರಶಸ್ತಿಯ ಆಸೆ ತೋರಿಸಿ ಬಾಯಿ ಮುಚ್ಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.