ADVERTISEMENT

ಕಸ ವಿಲೇವಾರಿಗೆ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 19:53 IST
Last Updated 4 ಡಿಸೆಂಬರ್ 2018, 19:53 IST
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ಅವರು ದಾಸೇನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾದ ಗೋಮಾಳ ಸ್ಥಳ ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಲಕ್ಷ್ಮೀ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿಂದು, ಗ್ರಾ.ಪಂ. ಸದಸ್ಯ ಅಂಜನಾದೇವಿ, ಕಾರ್ಯದರ್ಶಿ ಶ್ರೀನಿವಾಸ ಇದ್ದರು
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ಅವರು ದಾಸೇನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾದ ಗೋಮಾಳ ಸ್ಥಳ ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಲಕ್ಷ್ಮೀ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿಂದು, ಗ್ರಾ.ಪಂ. ಸದಸ್ಯ ಅಂಜನಾದೇವಿ, ಕಾರ್ಯದರ್ಶಿ ಶ್ರೀನಿವಾಸ ಇದ್ದರು   

ಬೆಂಗಳೂರು: ಹೆಸರಘಟ್ಟ ಗ್ರಾಮದ ಕಸವನ್ನು ವಿಲೇವಾರಿ ಮಾಡಲು ಜಾಗವನ್ನು ಪರಿಶೀಲನೆ ಮಾಡಲು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅರ್ಚನಾ ಅವರು ಗ್ರಾಮಕ್ಕೆ ಭೇಟಿ ನೀಡಿದರು.

‘ದಾಸೇನಹಳ್ಳಿ ಗ್ರಾಮದ ಸರ್ವೆ ನಂ 34ರಲ್ಲಿ ಇರುವ ಹದಿನೈದು ಎಕರೆ ಜಾಗದಲ್ಲಿ ನಾಲ್ಕು ಎಕರೆ ಜಾಗವು ಅಶ್ರಯ ಯೋಜನೆಗೆ ಮಂಜೂರಾಗಿದೆ. ಉಳಿದ ಹನ್ನೊಂದು ಎಕರೆ ಜಾಗದಲ್ಲಿ ಕಸ ವಿಲೇವಾರಿ ಮಾಡಬಹುದು. ಆದರೆ ಜಾಗವು ಒತ್ತುವರಿಯಾಗಿದೆ. ಸರ್ಕಾರಿ ಜಾಗವನ್ನು ರೆವಿನ್ಯೂ ಅಧಿಕಾರಿಗಳು ಗುರುತಿಸಿ ಕೊಡುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತ ಲಕ್ಷ್ಮೀ ಅವರು ವಿವರಣೆ ನೀಡಿದರು.

‘ಗ್ರಾಮದಲ್ಲಿ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿದರೆ ಕಸ ವಿಲೇವಾರಿ ಮಾಡಲು ಹೆಚ್ಚು ಜಾಗದ ಅವಶ್ಯಕತೆ ಬೇಕಾಗುವುದಿಲ್ಲ. ಮೊದಲು ಪಂಚಾಯಿತಿ ಸದಸ್ಯರಿಗೆ ಇದರ ಅರಿವು ಮೂಡಿಸಬೇಕು. ನಂತರ ಗ್ರಾಮಸ್ಥರಿಗೆ ತಿಳಿಸಬೇಕು. ಕಸ ವಿಲೇವಾರಿಗೆ ಜಾಗವನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅದಷ್ಟು ಬೇಗ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಅರ್ಚನಾ ಭರವಸೆ ನೀಡಿದರು.

ADVERTISEMENT

ದಾಸೇನಹಳ್ಳಿ, ಹೆಸರಘಟ್ಟ ಗ್ರಾಮಗಳ ಅಂಗನವಾಡಿ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ತೆರಳಿದ ಅವರು ಮಕ್ಕಳ ಬಳಿ ಶಾಲೆಯ ಸಮಸ್ಯೆಗಳನ್ನು ಆಲಿಸಿದರು. ಶೌಚಾಲಯ, ಪರಿಶುದ್ಧ ನೀರಿನ ಘಟಕಗಳನ್ನು ಪರಿಶೀಲಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಂದು ಮತ್ತು ಕಾರ್ಯದರ್ಶಿ ಶ್ರೀನಿವಾಸ, ತಾಲ್ಲೂಕು ಪಂಚಾಯಿತಿ ಸದಸ್ಯ ಅಶ್ವಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.