ADVERTISEMENT

ಕಾರ್ಮಿಕರಿಗೆ ಆರೋಗ್ಯ ಕಿಟ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಕೃಷ್ಣರಾಜಪುರ: ಇಲ್ಲಿನ ವಾರ್ಡ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎನ್.ವೀರಣ್ಣ ಅವರು ಪೌರಕಾರ್ಮಿಕರಿಗೆ ಆರೋಗ್ಯ ಕಿಟ್ ಅರ್ಹ ಫಲಾನುಭವಿಗಳಿಗೆ ಇಸ್ತ್ರಿ ಪೆಟ್ಟಿಗೆ, ತಕ್ಕಡಿ, ಮೂರು ಚಕ್ರದ ಸೈಕಲ್, ಬಕೆಟುಗಳನ್ನು ವಿತರಿಸಿದರು.

  ನಂತರ ಮಾತನಾಡಿದ ವೀರಣ್ಣ, ಶೇಕಡಾ 22.72 ಅಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸವಲತ್ತು ವಿತರಿಸಲಾಗಿದೆ ಎಂದರು.

  ಇದೇ ಸಂದರ್ಭದಲ್ಲಿ ಬಿಬಿಎಂಪಿ ಮತ್ತು `ಸ್ಟೆಪ್ಸ್~ ಸ್ವಯಂ ಸೇವಾ ಸಂಸ್ಥೆಯಿಂದ ಬಸವನಪುರದಲ್ಲಿ ಹಿರಿಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

  ಬಿಬಿಎಂಪಿ ಸಮಾಜ ಕಲ್ಯಾಣ ಅಧಿಕಾರಿ ಶಿವಕುಮಾರ್, ಬ್ರಹ್ಮಾನಂದ, ಪರಿಸರ ಎಂಜಿನಿಯರ್ ಮಂಜುನಾಥ್, ಆರೋಗ್ಯ ಇನ್‌ಸ್ಪೆಕ್ಟರ್ ಮುಕುಂದ,  ದಿವಾಕರ್, ಚಂದ್ರಶೇಖರ್, ಮಂಜುನಾಥ ರೆಡ್ಡಿ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.