ADVERTISEMENT

ಕುರುಬರ ಪೇಟೆ ಬಳಿ ನಡೆದ ಕೊಲೆ ಪ್ರಕರಣ :ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಹೊಸಕೋಟೆ: ಪಟ್ಟಣದ ಕುರುಬರ ಪೇಟೆ ಬಳಿ ಕಳೆದ ಜ. 15ರಂದು ನಡೆದ ವ್ಯಕ್ತಿ ಒಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕನೊಬ್ಬನನ್ನು ಶನಿವಾರ ಬಂಧಿಸಿದ್ದಾರೆ.

ಪಟ್ಟಣದ ರಜಪೂತರ ಪೇಟೆ ವಾಸಿ ಇಮ್ರಾನ್ ಪಾಷ (22) ಬಂಧಿತ ಆರೋಪಿ. ಮರಳು ಲಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಿಂತಾಮಣಿ ತಾಲ್ಲೂಕು ನಂದನ ಹೊಸಹಳ್ಳಿಯ ರಾಜ ಬಾಬು (32) ಕೊಲೆಯಾದ ವ್ಯಕ್ತಿ. ಆತನಲ್ಲಿದ್ದ ಹಣ ಕಸಿಯಲು ಆರೋಪಿ ರಾಜ ಬಾಬುವಿನ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ. ಸಿಪಿಐ ಎಂ.ಮಲ್ಲೇಶ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.