ADVERTISEMENT

ಕೆಲವಡೆ ಇಂದು ನೀರಿಲ್ಲ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ಬೆಂಗಳೂರು: ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆಯಲ್ಲಿ ನೆಟ್‌ಕಲ್ ಜಲಾಶಯದಿಂದ 7 ಕಿ.ಮೀ ದೂರದಲ್ಲಿ ಕೊಳವೆ ಜೋಡಣೆ ಕಾಮಗಾರಿ ಶುಕ್ರವಾರ ನಡೆಯಲಿರುವುದರಿಂದ ಕೆಳಕಂಡ ಸ್ಥಳಗಳಲ್ಲಿ ಕಾವೇರಿ 4ನೇ ಹಂತ ಒಂದನೇ ಘಟ್ಟದ ಯೋಜನೆಯ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಬಿಟಿಎಂ ಲೇಔಟ್, ಜೆ.ಪಿ.ನಗರ, ವಿಜಯಬ್ಯಾಂಕ್ ಲೇಔಟ್, ಊಡಿ, ಕೆ.ಆರ್. ಪುರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಬೆಳ್ಳಂದೂರು, ಮಾರತ್‌ಹಳ್ಳಿ, ಚಂದ್ರಲೇಔಟ್, ಕೆಂಗೇರಿ, ವಿಜಯನಗರ, ರಾಜಾಜಿನಗರ, ನಂದಿನಿ ಬಡಾವಣೆ,  ಮೂಡಲಪಾಳ್ಯ, ಮಹಾಲಕ್ಷ್ಮಿ ಲೇಔಟ್, ವಿದ್ಯಾರಣ್ಯಾಪುರ, ಪೀಣ್ಯ, ಮತ್ತಿಕೆರೆ, ಯಲಹಂಕ, ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.