ADVERTISEMENT

ಕೊಳವೆ ಬಾವಿ ನೀರು ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2013, 19:31 IST
Last Updated 16 ಫೆಬ್ರುವರಿ 2013, 19:31 IST
ಹೊರಮಾವು - ಅಗರ ಬಳಿ ಚೈತನ್ಯ ಬಡಾವಣೆಯಲ್ಲಿ ಕೊಳವೆ ಬಾವಿ ಮೂಲಕ ನೀರು ಪೂರೈಕೆ ಯೋಜನೆಗೆ ವಿಧಾನ ಪರಿಷತ್ ಸದಸ್ಯ ಬೈರತಿ ಎಸ್.ಸುರೇಶ್ ಈಚೆಗೆ ಚಾಲನೆ ನೀಡಿದರು. ಯುವ ಕಾಂಗ್ರೆಸ್ ಕ್ಷೇತ್ರ ಘಟಕದ ಅಧ್ಯಕ್ಷ ಎ.ಎಸ್.ರವಿಕುಮಾರ್, ವಾರ್ಡ್ ಸಮಿತಿಯ ಅಧ್ಯಕ್ಷ ಆರ್.ಪ್ರಕಾಶ್, ಗ್ರಾಮದ ಹಿರಿಯರಾದ ಹೆರಾಲ್ಡ್ ಇದ್ದರು

ಕೃಷ್ಣರಾಜಪುರ: `ಕ್ಷೇತ್ರ ವ್ಯಾಪ್ತಿಯ ಬಹುತೇಕ ನೆಮ್ಮದಿ ಹಾಗೂ ಸಹಾಯ ಕೇಂದ್ರಗಳಲ್ಲಿ ಸಿಬ್ಬಂದಿ ಮತ್ತು ಕಂಪ್ಯೂಟರ್ ಕೊರತೆ ಇದೆ. ನಗರ ಜಿಲ್ಲಾಧಿಕಾರಿಗಳು, ಮಹದೇವಪುರ ವಲಯ ಬಿಬಿಎಂಪಿ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ವಿಧಾನ ಪರಿಷತ್ ಸದಸ್ಯ ಬೈರತಿ ಎಸ್.ಸುರೇಶ್ ಒತ್ತಾಯಿಸಿದರು.

  ಹೊರಮಾವು - ಅಗರ, ಚೈತನ್ಯ ಬಡಾವಣೆಯಲ್ಲಿ ಶಾಸಕರ ಅನುದಾನದಿಂದ ಕೊಳವೆ ಬಾವಿ ನೀರು ಪೂರೈಕೆ ಯೋಜನೆಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾವೇರಿ ನೀರು ಪೂರೈಕೆ ಯೋಜನೆಗೆ ಬಿಬಿಎಂಪಿಗೆ ಸೇರಿದ ಗ್ರಾಮಗಳು ಸೇರ್ಪಡೆಯಾಗಿಲ್ಲ. ಉಚಿತ ಟ್ಯಾಂಕರ್ ನೀರಿನ ವ್ಯವಸ್ಥೆಯೂ ಇಲ್ಲ. ಹಾಗಾಗಿ ನಾಗರಿಕರ ಕೋರಿಕೆಯಂತೆ ಶಾಸಕರ ಅನುದಾನದಡಿ ಕೊಳವೆ ಬಾವಿ ಮೂಲಕ ನೀರು ಪೂರೈಕೆಗೆ ಚಾಲನೆ ನೀಡಲಾಗಿದೆ. ಚೇಳಕೆರೆ ಗ್ರಾಮದಲ್ಲೂ ಎರಡು ಕೊಳವೆ ಬಾವಿಗಳನ್ನು ಕೊರೆಯಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT