ಬೆಂಗಳೂರು: ಭಾರತಿನಗರ ನಿವಾಸಿಗಳ ಸಂಘದಿಂದ ಕಾಕ್ಸ್‌ಟೌನ್ ಕೊಳೆಗೇರಿ ನಿವಾಸಿಗಳಿಗೆ ಸೀರೆಯನ್ನು ವಿತರಿಸಲಾಯಿತು.
ಸಂಘದ ವತಿಯಿಂದ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯೆ ತಾರಾ ಅವರು ವಿತರಿಸಿ ಮಾತನಾಡಿ, `ದೀಪಾವಳಿ ಎಲ್ಲರ ಬದುಕಿನಲ್ಲಿಯೂ ಬೆಳಗನ್ನು ತರಲಿ. ದೀಪಾವಳಿ ಹಬ್ಬದ ಪ್ರಯುಕ್ತ ಭಾರತಿನಗರ ನಿವಾಸಿಗಳ ಸಂಘವು ಈ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ~ ಎಂದರು.
`ದೀಪಾವಳಿ ಹಬ್ಬದಲ್ಲಿ ಪಟಾಕಿಯನ್ನು ಹಾರಿಸದೆ, ದೀಪದಿಂದ ದೀಪವನ್ನು ಹಚ್ಚುವ ಮೂಲಕ ಆಚರಿಸಿ~ ಎಂದು ಕಿವಿ ಮಾತು ಹೇಳಿದರು.
ಸಂಘದ ಅಧ್ಯಕ್ಷ ಎನ್.ಎಸ್.ರವಿ ಮಾತನಾಡಿ, `ಹತ್ತು ವರ್ಷಗಳಿಂದ ಅಗತ್ಯವಿರುವವರಿಗೆ ಏನಾದರೂ ಕೊಡುವುದು ನಮ್ಮ ಪದ್ಧತಿಯಾಗಿದೆ. ಕಳೆದ ವರ್ಷ ಮಕ್ಕಳಿಗೆ ಬಟ್ಟೆ, ಸ್ವೆಟರ್ ವಿತರಣೆ ಮಾಡಲಾಗಿತ್ತು. ಈ ವರ್ಷ ದೀಪಾವಳಿ ಹಬ್ಬವು ಬಂದಿದ್ದರಿಂದ ಕೊಳೆಗೇರಿಯ ಒಟ್ಟು ಮುನ್ನೂರು ಮಹಿಳೆಯರಿಗೆ ಒಟ್ಟು ಸೀರೆಯನ್ನು ವಿತರಿಸಲಾಗಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.