ADVERTISEMENT

ಕೌಶಲ ವೃದ್ಧಿಯಿಂದ ಗುಣಮಟ್ಟದ ಉತ್ಪಾದನೆ: ಖರ್ಗೆ

ರೈಲು ಗಾಲಿ ಕಾರ್ಖಾನೆಗೆ ಅಂತರರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 20:12 IST
Last Updated 6 ಜನವರಿ 2014, 20:12 IST
ಯಲಹಂಕದ ರೈಲುಗಾಲಿ ಕಾರ್ಖಾನೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ಕಾರ್ಖಾನೆಗೆ ದೊರೆತಿರುವ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಭಾರ್ಗವ ಅವರಿಗೆ ನೀಡಿದರು
ಯಲಹಂಕದ ರೈಲುಗಾಲಿ ಕಾರ್ಖಾನೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ಕಾರ್ಖಾನೆಗೆ ದೊರೆತಿರುವ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಭಾರ್ಗವ ಅವರಿಗೆ ನೀಡಿದರು   

ಯಲಹಂಕ: ‘ಹೊರದೇಶಗಳ ಉತ್ಪನ್ನ­ಗಳ ಜೊತೆಗೆ ಪೈಪೋಟಿ ನಡೆಸುವ ರೀತಿಯಲ್ಲಿ ನಮ್ಮ ಕೌಶಲವನ್ನು ಅಭಿವೃದ್ಧಿ ಪಡಿಸಿಕೊಳ್ಳುವವರೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಲ್ಲಿನ ರೈಲುಗಾಲಿ ಕಾರ್ಖಾನೆಗೆ ಗುಣಮಟ್ಟ ಮತ್ತು ಉತ್ಪಾದನೆಯಲ್ಲಿ ನಿರಂತರ ಸುಸ್ಥಿರತೆಗೆ ಎರಡು ಅಂತರ­ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿ­ಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಖಾನೆಯ ಮುಖ್ಯ ಯಾತ್ರಿಕ ಅಧಿಕಾರಿ ಎಚ್‌.ಕೆ.ಕಾಲ, ಮುಖ್ಯ ಲೆಕ್ಕಾಧಿಕಾರಿ ಸುಬ್ರಹ್ಮಣ್ಯಂ, ಸಿಬ್ಬಂದಿ ಪರಿಷತ್ತಿನ ಜಂಟಿಕಾರ್ಯದರ್ಶಿ ರವೀಂದ್ರನಾಥ್‌ ಉಪಸ್ಥಿತರಿದ್ದರು.

‘ವರದಿ ನಂತರ ಕ್ರಮ’
‘ಆಂಧ್ರಪ್ರದೇಶದಲ್ಲಿ ಈಚೆಗೆ ನಡೆದ ರೈಲು ದುರಂತದ ಬಗ್ಗೆ ವರದಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಪರಿಶೀಲಿಸಿದ ಬಳಿಕ  ಸೂಕ್ತಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡ­ಲಾಗಿದ್ದು, ಇದದಲ್ಲಿ ಯಾವುದೇ ರಾಜಿ­ಯಿಲ್ಲ. ಸಿಬ್ಬಂದಿಯ ಬಹು­ತೇಕ ಬೇಡಿಕೆಗಳನ್ನು ಈಡೇರಿಸ­ಲಾಗಿದೆ. 79 ದಿನಗಳ ಬೋನಸ್‌ ನೀಡ­ಲಾಗಿದೆ. ಡಿ ಗ್ರೂಪ್‌ ಸಿಬ್ಬಂದಿ ವರ್ಗ­ದವರು ಮೃತಪಟ್ಟಲ್ಲಿ ಮಕ್ಕಳಿ­ಗೆ ಪರೀಕ್ಷೆ ನಡೆಸದೆ ಉದ್ಯೋಗ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT