ಬೆಂಗಳೂರು: ಗಿರಿನಗರ, ಕತ್ರಿಗುಪ್ಪೆ ಮತ್ತು ವಿದ್ಯಾಪೀಠ ವಾರ್ಡ್ ವಿಭಾಗಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ `ಅಭಯ~ದ 9ನೇ ವಾರ್ಷಿಕೋತ್ಸವ ಭಾನುವಾರ ನೆರವೇರಿತು.
ಹೊಸಕೆರೆಹಳ್ಳಿ ಕ್ರಾಸ್ ಬಳಿ ಇರುವ ಆಡೆನ್ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶಾಸಕ ಎಲ್.ವಿ.ರವಿಸುಬ್ರಹ್ಮಣ್ಯ 2012ನೇ ಸಾಲಿನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಿಟಿಜೆನ್ಸ್ ಆಕ್ಷನ್ ಫೋರಂ ಅಧ್ಯಕ್ಷ ಎನ್.ಎಸ್.ಮುಕುಂದ ಮಾತನಾಡಿ, ನಗರದಲ್ಲಿ ಎಲ್ಲ ವರ್ಗದ ನಾಗರಿಕರು ಹಾಗೂ ಅಧಿಕಾರಿಗಳು ಸೇರಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಇದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಬಸವನಗುಡಿ ವ್ಯಾಪ್ತಿಯ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಎಲ್. ಕೆಂಚಪ್ಪ, ಎನ್.ಎಸ್.ಮುಕುಂದ, ಶ್ರೀಕೃಷ್ಣ ವಾದಿರಾಜ ಪ್ರತಿಷ್ಠಾನದ ಕಾರ್ಯದರ್ಶಿ ಎನ್.ಆರ್.ನಾರಾಯಣ ರಾವ್, ಕೈಗಾರಿಕೋದ್ಯಮಿ ಎಸ್.ಎನ್.ಈಶ್ವರ್, ಸಮಾಜ ಸೇವಕ ಕತ್ರಿಗುಪ್ಪೆ ಕುಮಾರ್, ಒಕ್ಕೂಟದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪಾಲಿಕೆ ಸದಸ್ಯರಾದ ಎಚ್.ಎಸ್. ಲಲಿತಾ ವಿಜಯಕುಮಾರ್, ಡಿ.ವೆಂಕಟೇಶ್ ಮೂರ್ತಿ, ಎಂ.ವೆಂಕಟೇಶ್ (ಸಂಗಾತಿ), ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಸೇವಂತಿ ಹೆಗಡೆ, ಕಾರ್ಯದರ್ಶಿ ನಂದಾ ಪಿ.ರಾವ್, ೃತ್ಯುಂಜಯಾಚಾರ್, ಸುಖಾನಂದ, ಡಿ.ಬಿ.ನಂಜಪ್ಪ ವೇದಿಕೆ ಮೇಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.