ADVERTISEMENT

ಗುಟ್ಕಾ ಮಾರಾಟ: ಇಬ್ಬರ ಬಂಧನ, ಸರಕು ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 20:13 IST
Last Updated 12 ಜೂನ್ 2013, 20:13 IST

ಬೆಂಗಳೂರು: ಗುಟ್ಕಾ ಮಾರುತ್ತಿದ್ದ ಆರೋಪದ ಮೇಲೆ ಬಸವನಗುಡಿಯ ಅರುಣ್ (40) ಮತ್ತು ಅನಂತ್ (50) ಎಂಬುವರನ್ನು ಬಂಧಿಸಿರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು  ್ಙ 21 ಸಾವಿರ ಮೌಲ್ಯದ ಗುಟ್ಕಾ ಸರಕನ್ನು ವಶಪಡಿಸಿಕೊಂಡಿದ್ದಾರೆ.

ಸಿಟಿ ಮಾರುಕಟ್ಟೆ ಸಮೀಪ ಶಂಕರ್ ಟ್ರೇಡರ್ಸ್‌ ಮತ್ತು ರಾಜೇಶ್ವರಿ ಟ್ರೇಡರ್ಸ್‌ ಹೆಸರಿನ ಅಂಗಡಿ ಇಟ್ಟುಕೊಂಡಿದ್ದ ಆರೋಪಿಗಳು, ಗುಟ್ಕಾ ಮಾರಾಟ ನಿರ್ಬಂಧಿಸಿದ ನಂತರವೂ ಅಕ್ರಮವಾಗಿ ಗುಟ್ಕಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.