ಕೃಷ್ಣರಾಜಪುರ: ಶಾಲಾ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗಾಗಿ ತೆರೆದಿರುವ ಗುಡಾರ ಶಾಲೆಗಳಿಗೆ ಸೇರುವ ಮಕ್ಕಳ ಪ್ರತಿಭಾ ಪ್ರದರ್ಶನಕ್ಕಾಗಿ ಬೃಂದಾವನ ಗುಡಾರ ಶಾಲಾ ಮಕ್ಕಳ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನೃತ್ಯ ಪ್ರದರ್ಶನ, ಏಕಪಾತ್ರಾಭಿನಯ, ನಾಟಕಾಭಿನಯ, ಜನಪದ ನೃತ್ಯ ಮತ್ತು ಮಾನವೀಯ ಮೌಲ್ಯಗಳ ಕಿರುನಾಟಕಗಳನ್ನು ಮಕ್ಕಳು ಪ್ರದರ್ಶಿಸಿದರು.ಪಾಲಿಕೆ ಸದಸ್ಯೆ ಗೀತಾ ವಿವೇಕಾನಂದ ಬಾಬು ಮಾತನಾಡಿ, `ಈ ಭಾಗದಲ್ಲಿ ರಾಯಚೂರು, ಗುಲ್ಬರ್ಗ ಇತರ ಕಡೆಗಳಿಂದ ಕೂಲಿಗಾಗಿ ಬಂದು ನೆಲೆಸಿರುವವರ ಸಂಖ್ಯೆ ಹೆಚ್ಚಾಗಿದೆ.
ಮನೆಗೆ ಸಮೀಪದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಇಂತಹ ಮಕ್ಕಳಿಗಾಗಿ ಗುಡಾರ ಶಾಲೆಗಳನ್ನು ತೆರೆಯಲಾಗಿದೆ. ಶಿಕ್ಷಣ ಇಲಾಖೆ ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿ ಶಾಲೆ ನಡೆಯುತ್ತಿದೆ~ ಎಂದರು.ಶಿಕ್ಷಣ ಸಂಯೋಜಕ ಕೆ.ಮುನಿಯಲ್ಲಪ್ಪ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.