ADVERTISEMENT

ಗೆದ್ದಲಹಳ್ಳಿಗೆ ಬೇಕಿದೆ ರಸ್ತೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2016, 19:59 IST
Last Updated 7 ಆಗಸ್ಟ್ 2016, 19:59 IST
ಗೆದ್ದಲಹಳ್ಳಿ ಗ್ರಾಮದ ಕೆಸರುಮಯವಾಗಿರುವ ರಸ್ತೆಯಲ್ಲಿ ಸಾಹಸ ಪಡುತ್ತ ನಡೆದು ಹೋಗುತ್ತಿರುವ ವೃದ್ಧ ದಂಪತಿ
ಗೆದ್ದಲಹಳ್ಳಿ ಗ್ರಾಮದ ಕೆಸರುಮಯವಾಗಿರುವ ರಸ್ತೆಯಲ್ಲಿ ಸಾಹಸ ಪಡುತ್ತ ನಡೆದು ಹೋಗುತ್ತಿರುವ ವೃದ್ಧ ದಂಪತಿ   

ದೊಡ್ಡಬಳ್ಳಾಪುರ: ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದ ತೂಬಗೆರೆ ಹೋಬಳಿಯ ಗೆದ್ದಲಹಳ್ಳಿ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೆ ಮಳೆಗಾಲದಲ್ಲಿ ನಡೆದಾಡಲು ಸಾಹಸ ಪಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ದೊಡ್ಡಬಳ್ಳಾಪುರ–ಮಂಚೇನಹಳ್ಳಿ ಮುಖ್ಯ ರಸ್ತೆಯಿಂದ ಗೆದ್ದಲಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೋಗಬೇಕು. ಮಳೆ ಬಂದಾಗ ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ವೃದ್ದರು, ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳು ನಡೆದುಕೊಂಡು ಸಹ ಹೋಗಲು ಸಾಧ್ಯವಾಗದಷ್ಟು ಕೆಸರು ತುಂಬಿರುತ್ತದೆ. ಕತ್ತಲಿನ ಸಮಯದಲ್ಲಂತೂ ಯಾರೂ ಗ್ರಾಮಕ್ಕೆ ಬರಲು ಸಾಧ್ಯವೇ ಇಲ್ಲದಾಗಿದೆ.

ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ರಸ್ತೆಗೆ ಜಲ್ಲಿಯನ್ನು ಹಾಕಿಸಿ ನಡೆದು ಹೋಗಲು ಅನುಕೂಲ ಕಲ್ಪಿಸಿಲ್ಲ ಎಂದು ಗ್ರಾಮದ ಮುನಿರಾಜು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.