ADVERTISEMENT

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನವೀನ್ ನ್ಯಾಯಾಂಗ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2018, 19:24 IST
Last Updated 22 ಏಪ್ರಿಲ್ 2018, 19:24 IST
ಕೆ.ಟಿ.ನವೀನ್‌ ಕುಮಾರ್
ಕೆ.ಟಿ.ನವೀನ್‌ ಕುಮಾರ್   

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್‌ ಕುಮಾರ್ ಅಲಿಯಾಸ್‌ ಹೊಟ್ಟೆ ಮಂಜ, ಮಂಪರು ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದರಿಂದಾಗಿ ಎಸ್‌ಐಟಿ ತಂಡವು ಶನಿವಾರ ರಾತ್ರಿ ಆತನನ್ನು ನಗರಕ್ಕೆ ವಾಪಸ್‌ ಕರೆತಂದಿದೆ.

ಪರೀಕ್ಷೆಗಾಗಿ ನ್ಯಾಯಾಲಯದಿಂದ ಅನುಮತಿ ಪಡೆದಿದ್ದ ಎಸ್ಐಟಿ ತಂಡ, ಆರೋಪಿಯನ್ನು ಇತ್ತೀಚೆಗಷ್ಟೇ ಗುಜರಾತ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ದಿತ್ತು. ‘ಪೊಲೀಸರು ಬಲವಂತವಾಗಿ ತಪಾಸಣೆಗೆ ಕರೆ ತಂದಿದ್ದಾರೆ’ ಎಂದಿದ್ದ ಆರೋಪಿ, ಪರೀಕ್ಷೆಗೆ ತನ್ನ ಒಪ್ಪಿಗೆ ಇಲ್ಲವೆಂದು ಲಿಖಿತವಾಗಿ ಹೇಳಿದ್ದ. ‘ಮಂಪರು ಪರೀಕ್ಷೆಗೆ ಆರೋಪಿ ಒಪ್ಪಿಗೆ ನೀಡಲಿಲ್ಲ. ಆತನನ್ನು ವಾಪಸ್‌ ಕರೆ ತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಈ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಲಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT