ADVERTISEMENT

ಗ್ರಾಮ ದೇವತೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಕೃಷ್ಣರಾಜಪುರ: ದೇವರ ಉತ್ಸವಗಳು ಐಕ್ಯತೆಯ ಸಂಕೇತವಾಗಿದ್ದು, ಗ್ರಾಮದ ಎಲ್ಲಾ ಜನಾಂಗದವರು ಸಕ್ರಿಯವಾಗಿ ಭಾಗವಹಿಸುವ ಆಚರಣೆ ಇತರರಿಗೂ ಮಾರ್ಗದರ್ಶನವಾಗಬೇಕು ಎಂದು ಬಿಬಿಎಂಪಿ ಸದಸ್ಯ ಬಿ.ಎನ್. ಬಸವರಾಜು ಹೇಳಿದರು.

ಕೌದೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮ ದೇವತೆ ಪೂಜಮ್ಮ ಮತ್ತು ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಮೂರ್ತಿಗಳ ಮೆರವಣಿಗೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ ಅವರು, ನಿವಾಸಿಗಳ ಕೋರಿಕೆಯಂತೆ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸುವುದಾಗಿ ಆಶ್ವಾಸನೆ ನೀಡಿದರು.

ಗ್ರಾಮದ ಮುಖಂಡ ಶಿವಕುಮಾರ್, ಬೀರಪ್ಪ, ಸತೀಶ್, ನವೀನ್, ವಾಸು, ದಾಮೋದರ ರಾಜ್, ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಅಕ್ಷಯನಗರ, ಶಾಂತಿನಗರ, ಕಲ್ಕೆರೆ ಗ್ರಾಮಗಳ ಮೂಲಕ ದೇವಸ್ಥಾನ ತಲುಪಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.