ADVERTISEMENT

ಗ್ರಾಮ ವಿದ್ಯುತ್ ಸೇವಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ಬೆಂಗಳೂರು: ಕಳೆದ ಎಂಟು ವರ್ಷಗಳಿಂದ ರಾಜ್ಯದಾದ್ಯಂತ ಐದು ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ವಿದ್ಯುತ್ ಸೇವಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ‘ಕರ್ನಾಟಕ ರಾಜ್ಯ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟ’ದ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ವಿದ್ಯುತ್ ಸೇವಕರು ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಹತ್ತನೇ ದಿನಕ್ಕೆ ಕಾಲಿಟ್ಟಿದೆ.

ಪ್ರಸ್ತುತ ಒಬ್ಬ ಗ್ರಾಮ ವಿದ್ಯುತ್ ಪ್ರತಿನಿಧಿಯು ಇಬ್ಬರು ಕಾಯಂ ಸಿಬ್ಬಂದಿ ಕೆಲಸವನ್ನು (ಮೀಟರ್ ಓದುವ ಮತ್ತು ಕಂದಾಯ ವಸೂಲಿ ಮಾಡುವ ಕಿರಿಯ ಸಹಾಯಕ) ಮಾಡುತ್ತಿದ್ದಾನೆ. ಇದರಿಂದ ಐದೂ ಕಂಪೆನಿಗಳಿಗೆ ಪ್ರತಿ ತಿಂಗಳು 2.50 ಕೋಟಿ ಉಳಿತಾಯವಾಗುತ್ತಿದೆ. ಆದ್ದರಿಂದ ಎಲ್ಲ ಸಿಬ್ಬಂದಿಯನ್ನೂ ಕಾಯಂಗೊಳಿಸಬೇಕು ಎಂದರು.

ಐದೂ ಕಂಪೆನಿಗಳಲ್ಲಿ ಸಿ ಮತ್ತು ಡಿ ದರ್ಜೆಯ 23,541 ಹುದ್ದೆಗಳು ಖಾಲಿ ಇವೆ. ತಮಿಳುನಾಡು ವಿದ್ಯುತ್ ಇಲಾಖೆಯಲ್ಲಿ ಹಂಗಾಮಿಯಾಗಿ ಕೆಲಸ ಮಾಡುತ್ತಿದ್ದ ನೌಕರರ ಸೇವೆಯನ್ನು ಕಾಯಂ ಮಾಡಿದ ಮಾದರಿಯಲ್ಲೇ ನಮ್ಮನ್ನೂ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.