ADVERTISEMENT

ಚುನಾವಣಾ ಕರ್ತವ್ಯ ಲೋಪ: ಅಮಾನತು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:56 IST
Last Updated 10 ಮಾರ್ಚ್ 2014, 19:56 IST

ಬೆಂಗಳೂರು: ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳಲ್ಲಿ ಸಮರ್ಪಕವಾಗಿ ವಿಶೇಷ ಶಿಬಿರ ನಡೆಸದ ಆರೋಪದ ಮೇಲೆ ಕೆಂಪೇಗೌಡನಗರ ಉಪ ವಿಭಾಗದ ಕಂದಾಯ ವಸೂಲಿಗಾರ ಎಚ್‌.ಜಿ. ಸುರೇಶ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಕೆಂಪೇಗೌಡನಗರ ಬಾಲಕರ ಪ್ರೌಢಶಾಲೆಯಲ್ಲಿ ಮತಗಟ್ಟೆ ಸಂಖ್ಯೆ ೬೯, ೭೦, ೭೧, ೭೨ರ ಮತದಾರರ ಪಟ್ಟಿ ದೋಷ ಸರಿಪಡಿಸಲು ಶಿಬಿರ ನಡೆಸಬೇಕಿತ್ತು. ಶಾಲೆಯ ದ್ವಾರ ತೆಗೆಸದೆ ಹೊರಭಾಗದಲ್ಲಿ ನಿಂತು ಸಾರ್ವಜನಿಕರಿಗೆ ಅರ್ಜಿಗಳನ್ನು ನೀಡುತ್ತಿದ್ದುದು ಕಂಡುಬಂದಿದೆ. ಚುನಾವಣಾ ಕರ್ತವ್ಯದಲ್ಲಿ ಲೋಪ ಎಸಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.