ADVERTISEMENT

ಚುನಾವಣೆ: ತಕ್ಷಣ ವಾಹನ ಒಪ್ಪಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 20:03 IST
Last Updated 4 ಏಪ್ರಿಲ್ 2013, 20:03 IST

ಬೆಂಗಳೂರು: `ಚುನಾವಣಾ ಪ್ರಕ್ರಿಯೆಗೆ ವಾಹನಗಳ ಅಗತ್ಯ ಇರುವುದರಿಂದ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅರೆಸರ್ಕಾರಿ ಕಚೇರಿಗಳ ಸುಪರ್ದಿಯಲ್ಲಿ ಇರುವ ಎಲ್ಲ ವಾಹನಗಳನ್ನು ತಕ್ಷಣ ಒಪ್ಪಿಸಬೇಕು' ಎಂದು ಬಿಬಿಎಂಪಿ ಹೆಚ್ಚುವರಿ ಚುನಾವಣಾಧಿಕಾರಿ ಡಾ. ಆರ್.ವಿಶಾಲ್ ಅವರು ಆದೇಶ ಹೊರಡಿಸಿದ್ದಾರೆ.

`ಇಲಾಖೆಗಳು ಬಳಕೆ ಮಾಡುತ್ತಿರುವ ವಾಹನಗಳು ಸರ್ಕಾರಿ ಸ್ವಾಮ್ಯಕ್ಕೆ ಸಂಬಂಧಪಟ್ಟಿರಲಿ ಇಲ್ಲವೆ ಗುತ್ತಿಗೆ ಆಧಾರದ ಮೇಲೆ ಪಡೆದದ್ದಾಗಿರಲಿ ಚಾಲಕರ ಸಮೇತ ಅವುಗಳನ್ನು ಬಿಬಿಎಂಪಿ ಚುನಾವಣಾ ಸಾರಿಗೆ ವಿಭಾಗಕ್ಕೆ ತಕ್ಷಣ ಒಪ್ಪಿಸಿ ವರದಿ ಮಾಡಿಕೊಳ್ಳಬೇಕು. ಈಗಾಗಲೇ ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ನೋಟಿಸ್ ನೀಡಲಾಗಿದೆ. ವಾಹನ ಒಪ್ಪಿಸಲು ವಿಳಂಬ ಮಾಡಿದರೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.