ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳ ಜನರಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡುವ ಜಾತಿ ಪ್ರಮಾಣ ಪತ್ರಗಳು ಇನ್ನು ದೀರ್ಘಕಾಲ (ರದ್ದುಗೊಳಿಸುವವರೆಗೂ) ಬಳಕೆಯಲ್ಲಿರುತ್ತವೆ. ಆದಾಯ ದೃಢೀಕರಣ ಪತ್ರಗಳ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಶಿಕ್ಷಣ ಮತ್ತು ಉದ್ಯೋಗದ ಉದ್ದೇಶದಿಂದ ಪಡೆಯುವ ಪ್ರಮಾಣಪತ್ರಗಳ ಕಾಲಮಿತಿ ವಿಸ್ತರಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದಾಯ ಪ್ರಮಾಣ ಪತ್ರವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪಡೆಯಬೇಕಾಗುತ್ತದೆ. ಒಮ್ಮೆ ಪಡೆದ ಜಾತಿ ದೃಢೀಕರಣ ಪತ್ರ ಸರ್ಕಾರ ನಿರ್ದಿಷ್ಟ ಕಾರಣಗಳಿಗಾಗಿ ರದ್ದು ಮಾಡುವವರೆಗೂ ಅಸ್ತಿತ್ವದಲ್ಲಿರುತ್ತದೆ.
ಜಾತಿ ಪ್ರಮಾಣ ಪತ್ರ, ವಾಸಸ್ಥಳ ಧಢೀಕರಣ ಪತ್ರ, ಶೈಕ್ಷಣಿಕ ಉದ್ದೇಶಕ್ಕಾಗಿ ಆದಾಯ ಪ್ರಮಾಣ ಪತ್ರ ನೀಡುವುದು ಮತ್ತಿತರ ಸೇವೆಗಳನ್ನು ಒದಗಿಸುವ ಅಧಿಕಾರವನ್ನು ನಾಡಕಚೇರಿಯ ಉಪ ತಹಶೀಲ್ದಾರರಿಗೆ ನೀಡಲಾಗಿದೆ. ಈವರೆಗೂ ಈ ಅಧಿಕಾರ ತಹಶೀಲ್ದಾರರ ಬಳಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.