ADVERTISEMENT

ಜಾಹೀರಾತು, ಪ್ರಚಾರ ಫಲಕಗಳ ತೆರವು ಚುರುಕು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 19:21 IST
Last Updated 30 ಸೆಪ್ಟೆಂಬರ್ 2018, 19:21 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು, ಪ್ರಚಾರ ಫಲಕಗಳ ಸಂರಚನೆ (ಸ್ಟ್ರಕ್ಚರ್‌) ತೆರವು ಕಾರ್ಯ ಚುರುಕುಕೊಂಡಿದೆ.

ಸೆ.17ರಿಂದ 30ರವರೆಗೆ ಒಟ್ಟು 803 ಸ್ಟ್ರಕ್ಚರ್‌ಗಳನ್ನು ತೆರವು ಮಾಡಲಾಗಿದ್ದು, 600 ಸ್ಟ್ರಕ್ಚರ್‌ಗಳ ತೆರವು ಬಾಕಿ ಇದೆ. 1,848 ಸ್ಟ್ರಕ್ಚರ್‌ಗಳಿಗೆ ಸಂಬಂಧಿಸಿದಂತೆ ಅವುಗಳನ್ನು ಅಳವಡಿಸಿದವರಿಗೆ ಪಾಲಿಕೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

271 ಸ್ಟ್ರಕ್ಚರ್‌ಗಳ ತೆರವು ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.