ADVERTISEMENT

ಜಿಮ್ ಕೇಂದ್ರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2013, 19:59 IST
Last Updated 1 ಫೆಬ್ರುವರಿ 2013, 19:59 IST
ಮಲ್ಲೇಶ್ವರದ ಈಜುಕೊಳ ಬಡಾವಣೆಯಲ್ಲಿ ಶುಕ್ರವಾರ ನೂತನವಾಗಿ ಉದ್ಘಾಟನೆಗೊಂಡ ಬಿಬಿಎಂಪಿಯ ಜಿಮ್ ಕೇಂದ್ರದಲ್ಲಿ ಮಕ್ಕಳು ತರಬೇತಿ ಪಡೆಯುತ್ತಿರುವ ದೃಶ್ಯ
ಮಲ್ಲೇಶ್ವರದ ಈಜುಕೊಳ ಬಡಾವಣೆಯಲ್ಲಿ ಶುಕ್ರವಾರ ನೂತನವಾಗಿ ಉದ್ಘಾಟನೆಗೊಂಡ ಬಿಬಿಎಂಪಿಯ ಜಿಮ್ ಕೇಂದ್ರದಲ್ಲಿ ಮಕ್ಕಳು ತರಬೇತಿ ಪಡೆಯುತ್ತಿರುವ ದೃಶ್ಯ   

ಬೆಂಗಳೂರು:  ಮಲ್ಲೇಶ್ವರದ ಈಜುಕೊಳ ಬಡಾವಣೆಯಲ್ಲಿರುವ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಜಿಮ್ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಎರಡು ಮಹಡಿಯ ಕಟ್ಟಡದಲ್ಲಿ ಮಹಿಳೆಯರು ಮತ್ತು ಪುರಷರಿಗೆ ಪ್ರತ್ಯೇಕಾವಧಿಯಲ್ಲಿ ವ್ಯಾಯಾಮ ತರಗತಿಗಳು ನಡೆಯಲಿವೆ. ವ್ಯಾಯಾಮ, ಏರೋಬಿಕ್ ಮತ್ತು ನೃತ್ಯ ತರಗತಿಗಳು ನಡೆಯಲಿವೆ. ಸದಾಶಿವನಗರದಲ್ಲಿರುವ ಅಫಿನಿಟಿ ಜಿಮ್ ಸಂಸ್ಥೆಯು ಈ ಜಿಮ್ ಕೇಂದ್ರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವುದಲ್ಲದೇ, ಈ ಸಂಸ್ಥೆಯ ಸದಸ್ಯರೇ ವ್ಯಾಯಾಮದ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರವೂ ಬೆಳಿಗ್ಗೆ ಮತ್ತು ಸಂಜೆ ಎರಡು ಕಾಲಾವಧಿಯಲ್ಲಿ ತರಬೇತಿ ನೀಡಲಿದೆ.

ಕೇಂದ್ರವನ್ನು ಉದ್ಘಾಟಿಸಿದ ಮಲ್ಲೇಪುರ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, `ಈ ಆಧುನಿಕ ಜಗತ್ತಿನಲ್ಲಿ ಆರೋಗ್ಯ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಹಾಗಾಗಿ ಈ ವಿಧಾನಸಭಾ ಕ್ಷೇತ್ರದಲ್ಲಿನ ಜನರಿಗೆ ಜಿಮ್ ಕೇಂದ್ರ ಲಭ್ಯವಾಗಲಿ ಎನ್ನುವ ಕಾರಣದಿಂದ ಸುಸಜ್ಜಿತ ಜಿಮ್ ಕೇಂದ್ರವನ್ನು ತೆರೆಯಲಾಗಿದ್ದು, ಜನತೆ ಉಪಯೋಗಿಸಿಕೊಳ್ಳಬೇಕು' ಎಂದು ಮನವಿ ಮಾಡಿದರು.

`ಆರೋಗ್ಯ ಮತ್ತು ದೇಹಧಾರ್ಡ್ಯವನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಲು ಸತತ ವ್ಯಾಯಾಮ ಸಹಕಾರಿ. ಪಾಲಿಕೆ ವತಿಯಿಂದ ಉತ್ತಮ ಗುಣಮಟ್ಟದ ವ್ಯಾಯಾಮ ಯಂತ್ರಗಳನ್ನು ನೀಡಲಾಗಿದೆ' ಎಂದು ತಿಳಿಸಿದರು.

ಜಿಮ್ ಕೇಂದ್ರವು ಬೆಳಿಗ್ಗೆ 6 ರಿಂದ 10, ಸಂಜೆ 5 ರಿಂದ 9.30ವರೆಗೆ ತೆರೆದಿದ್ದು, ಬೆಳಿಗ್ಗೆ 10 ರಿಂದ ಮ. 12.30ವರೆಗೂ ಮಹಿಳೆಯರಿಗೆ ಅವಕಾಶವಿರುತ್ತದೆ. ಕೇಂದ್ರದಲ್ಲಿ ಯಾವುದೇ ತರಬೇತಿ ಪಡೆಯಲು ವಾರ್ಷಿಕ ಶುಲ್ಕ ರೂ. 750.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.