
ಪ್ರಜಾವಾಣಿ ವಾರ್ತೆಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ 2013-14ನೇ ಸಾಲಿನ ತರಗತಿಗಳು ಜುಲೈ 10ರಂದು ಆರಂಭಗೊಳ್ಳಲಿವೆ.
ಈ ಮೊದಲು ಜೂನ್ 24ರಂದು ತರಗತಿಗಳು ಆರಂಭಗೊಳ್ಳಲಿವೆ ಎಂದು ಘೋಷಿಸಲಾಗಿತ್ತು.
ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆದ ವಿಳಂಬದಿಂದ ತರಗತಿಗಳ ಪುನರಾರಂಭ ತಡವಾಗಿದೆ. ತರಗತಿ ವೇಳಾಪಟ್ಟಿಯನ್ನು ಶೀಘ್ರ ಘೋಷಿಸಲಾಗುವುದು ಎಂದು ವಿವಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.