ADVERTISEMENT

ಡಿಎನ್‌ಎ ಸಂಶೋಧನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ಬೆಂಗಳೂರು : ನವ ವಿಜ್ಞಾನ ಅನ್ವೇಷಣೆ ಜೊತೆಗೆ ಔಷಧಿ ಕ್ಷೇತ್ರಕ್ಕೆ ಪೂರಕವಾಗುವಂತೆ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಡಿಎನ್‌ಎ ಸಂಶೋಧನೆ ಅಗತ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಆರ್.ಎಂ.ರಂಗನಾಥ್ ಅಭಿಪ್ರಾಯಪಟ್ಟರು.

ಇಂಡಿಯನ್ ಅಕಾಡೆಮಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಇತ್ತೀಚೆಗೆ ಆಯೋಜಿಸಿದ್ದ ಜಿನೋಮಿಕ್ಸ್ ಅಂಡ್ ಪ್ರೊಟೋನಿಕ್ಸ್ ವಿಷಯಗಳ ವರ್ತಮಾನದ ಬದಲಾವಣೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವಿಜ್ಞಾನಿಗಳು ಮಾನವ ಅಂಗಾಂಶ, ಡಿಎನ್‌ಎ ತಂತ್ರಜ್ಞಾನದತ್ತ ಹೆಚ್ಚು ಒಲವು ತೋರುತ್ತಿದ್ದು, ಈ ನಿಟ್ಟಿನಲ್ಲಿ ಮಹತ್ವದ ಸಂಶೋಧನೆಗಳು ನಡೆಯುತ್ತಿವೆ. ಔಷಧ ಕ್ಷೇತ್ರದಲ್ಲೂ ಮಹತ್ತರ ಅವಿಷ್ಕಾರಗಳಾಗಿವೆ ಎಂದು ಹೇಳಿದರು.

ಇಂಡಿಯನ್ ಅಕಾಡೆಮಿ ಅಧ್ಯಕ್ಷ ಡಾ.ಟಿ.ಸೋಮಶೇಖರ್, ಪ್ರೊ. ಸಾರಂಗಿ, ಪ್ರೊ.ಚಿದಾನಂದಶರ್ಮಾ, ಟಿ.ಭಾರತಿ ಉಪಸ್ಥಿತರಿದ್ದರು.

ಕದ್ರ ಜಿಲ್ಲಾ ಗೃಹ ರಕ್ಷಕ ದಳವು ಗೃಹ ರಕ್ಷಕ ದಳಕ್ಕೆ ಸೇರಲು ಆಸಕ್ತರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 4ನೇ ತರಗತಿ ಉತ್ತೀರ್ಣರಾದ 20 ರಿಂದ 40 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಅರ್ಜಿಗಳು ಆಯಾ ಜಿಲ್ಲಾ ಗೃಹರಕ್ಷಕ ದಳ ಘಟಕದಲ್ಲಿ ದೊರೆಯಲಿದ್ದು, ಜುಲೈ 30 ರೊಳಗೆ ಆಯಾ ಘಟಕದ ಘಟಕಾಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಜಿಲ್ಲಾ ಗ್ರಹರಕ್ಷಕದಳ, ನಂ 4, ಶೇಷಾದ್ರಿರಸ್ತೆ. ಈ ವಿಳಾಸ ಸಂಪರ್ಕ ಮಾಡಬಹುದು. ದೂರವಾಣಿ ಸಂಖ್ಯೆ: 2234 0447.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.