ADVERTISEMENT

ಡೆಂಗೆ: ಸಂಜಯನಗರ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 20:31 IST
Last Updated 21 ಜುಲೈ 2013, 20:31 IST

ಬೆಂಗಳೂರು: ಸಂಜಯನಗರದ ನಿವಾಸಿ ವಿಜಯಕುಮಾರ್ (19) ಡೆಂಗೆ ಜ್ವರದಿಂದ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಭಾನುವಾರಮೃತಪಟ್ಟರು.

ಕಳೆದ ಒಂದು ವಾರದಿಂದ ತೀವ್ರವಾದ ಜ್ವರ ಹಾಗೂ ಬಳಲಿಕೆ ಕಂಡುಬಂದಿತ್ತು. ಅಲ್ಲದೇ ರಕ್ತದಲ್ಲಿ ಪ್ಲೇಟ್‌ಲೆಟ್ಸ್ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು. ಆರಂಭದಲ್ಲಿ ಮನೆಯ ಸಮೀಪವಿದ್ದ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ್ವರದ ತೀವ್ರತೆ  ಹೆಚ್ಚಾಗಿದ್ದರಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ಸಂಬಂಧಿಕ ಆನಂದ್ ತಿಳಿಸಿದರು.

`ಪ್ರಾಥಮಿಕ ವರದಿಯಿಂದ ಡೆಂಗೆಯೆಂದು ದೃಢಪಟ್ಟಿದ್ದು, ಪ್ಲೇಟ್‌ಲೆಟ್ಸ್ ಸಂಖ್ಯೆ ಕಡಿಮೆಯಾಗಿದ್ದರಿಂದ ಹೆಚ್ಚಿನ ಪ್ಲೇಟ್‌ಲೆಟ್ಸ್ ಪೂರೈಸಿದ್ದೆವು' ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.