ADVERTISEMENT

ತಂಬಾಕು ರಹಿತ ದಿನ: 10 ಲಕ್ಷ ಸಹಿ ಸಂಗ್ರಹಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST

ಬೆಂಗಳೂರು: ತಂಬಾಕು ದುಷ್ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘10 ಲಕ್ಷ ಸಹಿ ಸಂಗ್ರಹ’ ಆಂದೋಲನಕ್ಕೆ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ಚಾಲನೆ ನೀಡಿದೆ.

ಮೇ 31ರಂದು ಇರುವ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಆರಂಭವಾದ ಅಭಿಯಾನಕ್ಕೆ ಅಥ್ಲೀಟ್ ಅರ್ಜುನ್ ದೇವಯ್ಯ ಸಹಿ ಹಾಕುವ ಮೂಲಕ ಚಾಲನೆ ನೀಡಿದರು.

ರಾಜ್ಯದ ಆರು ನಗರಗಳಲ್ಲಿ ಸ್ಥಾಪನೆಯಾಗಲಿರುವ, ತಂಬಾಕು ವಿರೋಧಿ ಮಾಹಿತಿಗಳನ್ನು ಒಳಗೊಂಡ ಕಿಯೋಸ್ಕ್‌ ಅನ್ನು ಬಿಬಿಎಂಪಿ ಅಧಿಕಾರಿ ಎಚ್‌.ಎನ್‌.ಲೋಕೇಶ್ ಉದ್ಘಾಟಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.