ADVERTISEMENT

ತಪ್ಪಿಸಿಕೊಂಡ ಕರಡಿ, ಹೆಚ್ಚಿದ ಆತಂಕ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಿಲ್ಲದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2016, 20:16 IST
Last Updated 28 ಜನವರಿ 2016, 20:16 IST
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ತಪ್ಪಿಸಿಕೊಂಡಿರುವ ಹಿಮಾಲಯನ್‌ ಕರಡಿಯೊಂದನ್ನು ಪತ್ತೆ ಹಚ್ಚಲು ಡ್ರೋಣ್ ಕ್ಯಾಮರಾ ಬಳಸಲಾಯಿತು.
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ತಪ್ಪಿಸಿಕೊಂಡಿರುವ ಹಿಮಾಲಯನ್‌ ಕರಡಿಯೊಂದನ್ನು ಪತ್ತೆ ಹಚ್ಚಲು ಡ್ರೋಣ್ ಕ್ಯಾಮರಾ ಬಳಸಲಾಯಿತು.   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಕರಡಿ ಪುನರ್ವಸತಿ ಕೇಂದ್ರದಲ್ಲಿದ್ದ ಹಿಮಾಲಯನ್‌ ಕರಡಿಯೊಂದು ಉದ್ಯಾನದಿಂದ ತಪ್ಪಿಸಿಕೊಂಡು ಕಾಡು ಸೇರಿರುವುದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

ಕಳೆದ ಆರು ತಿಂಗಳ ಹಿಂದೆ ಪ್ರಾಣಿ ವಿನಿಮಯ ಯೋಜನೆಯಡಿ ತ್ರಿಪುರದ ಅಗರ್ತಲದಿಂದ ಎರಡು ಹಿಮಾಲಯನ್‌ ಕರಡಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿತ್ತು. ಈ ಪೈಕಿ ಹೆಣ್ಣು ಕರಡಿ ಉದ್ಯಾನದಿಂದ ತಪ್ಪಿಸಿಕೊಂಡು ಕಾಡು ಸೇರಿದೆ.

ಉದ್ಯಾನಕ್ಕೆ ತಂದಾಗಿನಿಂದಲೂ ಉಗ್ರ ಸ್ವಭಾವ ಹೊಂದಿದ್ದ ಹಿಮಾಲಯನ್‌ ಹೆಣ್ಣು ಕರಡಿಯನ್ನು ಪ್ರತ್ಯೇಕವಾಗಿ ಆರೈಕೆ ಮಾಡಲಾಗಿತ್ತು. ಕರಡಿಯ ವಿನಿಮಯ ಸಂದರ್ಭದಲ್ಲಿಯೇ ಕಾಡು ಕರಡಿಯಾಗಿದ್ದ ಹಿಮಾಲಯನ್‌ ಕರಡಿಯನ್ನು ಪಳಗಿಸುವ ಪ್ರಯತ್ನ ಜೈವಿಕ ಉದ್ಯಾನದಲ್ಲಿ ಮಾಡಲಾಗಿತ್ತು. ಗುರುವಾರ ಕರಡಿಯನ್ನು ಪಂಜರದಿಂದ ಕರಡಿಯ ಆವರಣಕ್ಕೆ ವೀಕ್ಷಣೆಗಾಗಿ ಪ್ರಾಯೋಗಿಕವಾಗಿ ಬಿಡಲಾಗಿತ್ತು. ಈ ಸಂದರ್ಭದಲ್ಲಿ ಕರಡಿಯು ತಂತಿ ಬೇಲಿಯನ್ನು ಜಿಗಿದು ಕಾಡಿನತ್ತ ಪರಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.