ADVERTISEMENT

ತರಬೇತಿ ಅವಧಿ ಸದುಪಯೋಗಕ್ಕೆ ಕರೆ

‘ವಿಂಟರ್‌ ಸ್ಕೂಲ್‌’ ಇಂಟರ್ನ್‌­­ಶಿಪ್‌ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 20:00 IST
Last Updated 10 ಡಿಸೆಂಬರ್ 2013, 20:00 IST

ಬೆಂಗಳೂರು: ‘ವಿದ್ಯಾರ್ಥಿಗಳು ತರಬೇತಿ ಅವಧಿಯನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಶೋಧನೆಗೆ ಮುಂದಾಗಬೇಕು’ ಎಂದು ಎಂ.ಎಸ್‌.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್‌.ವೈ.­ಕುಲಕರ್ಣಿ ಹೇಳಿದರು.

ಎಂ.ಎಸ್‌.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ ಮತ್ತು ಅಮೆರಿಕದ ಕಾರ್ನೆಗಿ ಮೆಲಾನ್‌ ವಿಶ್ವವಿದ್ಯಾಲಯದ ಸಹ­ಯೋಗ­ದಲ್ಲಿ ಆಯೋಜಿಸಿರುವ ‘ವಿಂಟರ್‌ ಸ್ಕೂಲ್‌’  ಇಂಟರ್ನ್‌­­ಶಿಪ್‌ ಕಾರ್ಯಕ್ರಮವನ್ನು  ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ರೀತಿಯ ತರಬೇತಿ ಕಾರ್ಯಕ್ರಮಗಳು ವಿದ್ಯಾರ್ಥಿ­ಗಳನ್ನು ಹೆಚ್ಚಿನ ಕಲಿಕೆಗೆ ಪ್ರೋತ್ಸಾಹಿಸುತ್ತವೆ. 15 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ನವದೆಹಲಿ, ಮುಂಬೈ, ಹೈದರಾ­ಬಾದ್‌ ಸೇರಿದಂತೆ ವಿವಿಧ ಐಐಟಿ ಮತ್ತು ಎನ್‌ಐಟಿ ಕಾಲೇಜು­ಗಳ 60 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಕಾರ್ನೆಗಿ ಮೆಲಾನ್‌ ವಿಶ್ವವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ ಡಾ.ಭಿಕ್ಷಾರಾಜ್‌ ಮಾತ­ನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಇದು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು.

ತರಬೇತಿ ಅವಧಿಯಲ್ಲಿ ಆಯ್ದ ವಿಷಯಗಳ  ಕುರಿತು ವಿದ್ಯಾರ್ಥಿಗಳು ಸಂಶೋಧನೆ ನಡೆಸಲಿದ್ದು ಅಂತಿಮ ದಿನ ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.