ಬೆಂಗಳೂರು: ನಗರದ ಹೊರವಲಯದ ತುರಹಳ್ಳಿ ಕಾಡಿಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
‘ಚಿಕ್ಕೇಗೌಡನಪಾಳ್ಯ-ಗಾಣಿಗರಪಾಳ್ಯ ಮಧ್ಯೆ ಬರುವ ಬನಶಂಕರಿ ಬಿಡಿಎ ಆರನೇ ಹಂತದ ಸಮೀಪವಿರುವ ರಕ್ಷಿತಾರಣ್ಯ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಘಟನೆ ಜರುಗಿದೆ. 750 ಎಕರೆ ಪ್ರದೇಶದಲ್ಲಿ ಈ ಅರಣ್ಯ ಇದೆ. ಅರಣ್ಯ ಪ್ರದೇಶದ ಮೇಲೆ ಬಿಲ್ಡರ್‌ಗಳ ಕಣ್ಣು ಬಿದ್ದಿದೆ. ಜಮೀನು ಕಬಳಿಸುವ ಉದ್ದೇಶದಿಂದ ಬೆಂಕಿ ಹಾಕಲಾಗಿದೆ’ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.