ADVERTISEMENT

ದಾಳಿಗೆ ಒಕ್ಕಲಿಗರ ಸಂಘ ಖಂಡನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 20:00 IST
Last Updated 1 ಜೂನ್ 2018, 20:00 IST

ಬೆಂಗಳೂರು: ‘ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ವ್ಯಕ್ತಿಗತವಾದ ದಾಳಿ ಮಾಡಿ ತೇಜೋವಧೆ ಮಾಡುವುದು ನಿಲ್ಲಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ಒತ್ತಾಯಿಸಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘ಬಿಜೆಪಿಯವರು ಶಿವಕುಮಾರ್ ಅವರನ್ನು ತಮ್ಮತ್ತ ಸೆಳೆಯಲು ಯತ್ನಿಸಿದ್ದರು. ಅವರು ಮಣಿಯದಿದ್ದಾಗ ಈ ರೀತಿ ದಾಳಿ ಮಾಡುತ್ತಿದ್ದಾರೆ. ಹಾಗೆ ಆಮಿಷವೊಡ್ಡಿದವರ ಮೇಲೂ ದಾಳಿ ನಡೆಸಬಹುದಿತ್ತಲ್ಲವೇ? ವಿನಾಕಾರಣ ತೇಜೋವಧೆ ಮಾಡುವುದು ಏಕೆ? ಇದು ಮುಂದುವರಿದರೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು. ದೆಹಲಿಗೆ ನಿಯೋಗ ತೆರಳಿ ಪ್ರತಿಭಟನೆ ನಡೆಸಲಾಗುವುದು. ಪ್ರಧಾನಿಯವರಿಗೂ ಈ ವಿಷಯ ಮನವರಿಕೆ ಮಾಡಲಾಗುವುದು’ ಎಂದರು.

‘ಈ ಪ್ರಕರಣ ನೋಡಿದರೆ, ನಾಳೆ ನಮ್ಮ ಮೇಲೂ ಇದೇ ಸಂಸ್ಥೆಗಳನ್ನು ಬಳಸಿಕೊಂಡು ತೇಜೋವಧೆ ಮಾಡಬಹುದಲ್ಲವೇ ಎಂದು ಬಿಜೆಪಿ ನಾಯಕರೇ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ನಿಷ್ಠಾವಂತ ನಾಯಕನ ಬೆಳವಣಿಗೆಯನ್ನು ಕಟ್ಟಿಹಾಕುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಡಿಕೆಶಿ ಅವರಿಗೆ ಮಂತ್ರಿ ಪದವಿ ಕೊಡುವುದು ಅಥವಾ ಬಿಡುವುದು ಆಯಾ ಪಕ್ಷಗಳ ಆಂತರಿಕ ವಿಚಾರ. ನಮ್ಮ ಹೋರಾಟ ವ್ಯಕ್ತಿಗತ ದಾಳಿಯ ವಿರುದ್ಧ ಎಂದು ಸ್ಪಷ್ಟಪಡಿಸಿದರು.

ಸಂಘದ ಪದಾಧಿಕಾರಿಗಳಾದಯಳವಳ್ಳಿ ರಮೇಶ್, ಡಿ.ಸಿ.ಕೆ. ಕಾಳೇಗೌಡ, ಪ್ರೊ. ಮಲ್ಲಯ್ಯ, ಕೆ.ಕೃಷ್ಣಮೂರ್ತಿ, ಬಿ.ಪಿ.ಮಂಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.