ADVERTISEMENT

ದೇಶದ ಸಾಂಸ್ಕೃತಿಕ ಪರಂಪರೆ ವಿಶ್ವಕ್ಕೆ ಮಾದರಿ-ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಬೆಂಗಳೂರು: `ದೇಶದ ಸಾಂಸ್ಕೃತಿಕ ಪರಂಪರೆಯು ವಿಶ್ವಕ್ಕೆ ಮಾದರಿಯಾದದ್ದು. ಅದನ್ನು ಉಳಿಸುವ ಕೆಲಸವಾಗಬೇಕು' ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ಹೇಳಿದರು.

ಜ್ಞಾನಕೇಂದ್ರ ಎಜುಕೇಷನ್ ಟ್ರಸ್ಟ್ ಮತ್ತು ನಾಟ್ಯಾಂಜಲಿ ಸಂಸ್ಥೆಯು ಶನಿವಾರ ನಗರದಲ್ಲಿ ಆಯೋಜಿಸಿದ್ದ ಸಮರ್ಪಣಂ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಟಿ.ವಿ.ಕಾರ್ಯಕ್ರಮಗಳಿಂದಾಗಿ ದೇಶದ ಪ್ರಾಚೀನ ಕಲೆಗಳು ನಶಿಸುತ್ತಿವೆ. ದೇಶದ ಪ್ರಾಚೀನ ಕಲೆಗಳಾದ ನೃತ್ಯ, ಸಂಗೀತವನ್ನು ಕುರಿತು ಅಧ್ಯಯನ ನಡೆಸಲು ವಿದೇಶಗಳಿಂದ ಜನರು ಬರುತ್ತಿರುವುದು ದೇಶದ ಹೆಮ್ಮೆ' ಎಂದು ಹೇಳಿದರು. `ಮಹಾಭಾರತ ಮತ್ತು ರಾಮಾಯಣ ಕಥೆಗಳಲ್ಲಿ ಮನೋರಂಜನೆಯ ಜತೆಗೆ ಸಮಾಜಕ್ಕೆ ಸಂದೇಶ ಮತ್ತು ನೀತಿಯು ದೊರೆಯುತ್ತಿತ್ತು. ಇಂದಿನ ಟಿ.ವಿ.ಕಾರ್ಯಕ್ರಮಗಳಲ್ಲಿ ಅಂತಹ ಯಾವುದೇ ನೀತಿ ಸಂದೇಶಗಳು ಸಿಗುತ್ತಿಲ್ಲ' ಎಂದರು.  ಕಾರ್ಯಕ್ರಮದಲ್ಲಿ ನೃತ್ಯ ಗುರು ಅಶೋಕ್ ಕುಮಾರ್ ಅವರಿಗೆ `ಕರ್ನಾಟಕ ನಾಟ್ಯ ರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಟಿ ಭಾರತಿ ವಿಷ್ಣುವರ್ದನ್, ಕಿರುತೆರೆ ನಿರ್ದೇಶಕ ರವಿಕಿರಣ್, ಹಿನ್ನೆಲೆ ಗಾಯಕಿ ಸಂಗೀತಾ ಕಟ್ಟಿ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಡಾ.ಭಾನು ಪ್ರಕಾಶ್ ಶರ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.