ADVERTISEMENT

ನಟ ಅಂಬರೀಷ್‌ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2014, 19:30 IST
Last Updated 25 ಫೆಬ್ರುವರಿ 2014, 19:30 IST
ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಅಂಬರೀಷ್‌ ಅಭಿಮಾನಿಗಳೊಂದಿಗೆ   ಮಾತನಾಡಿದರು	–ಪ್ರಜಾವಾಣಿ ಚಿತ್ರ
ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಅಂಬರೀಷ್‌ ಅಭಿಮಾನಿಗಳೊಂದಿಗೆ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಟ, ವಸತಿ ಸಚಿವ ಅಂಬರೀಷ್‌ ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಸಹಜ ಸ್ಥಿತಿಗೆ ಮರುಳುತ್ತಿದ್ದಾರೆ.
ಈ ಬಗ್ಗೆ ಮಂಗಳವಾರ ಮಾಹಿತಿ  ನೀಡಿದ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.­ರವೀಶ್, ‘ಆರೋಗ್ಯದಲ್ಲಿ ಗಣನೀಯ­ವಾಗಿ ಚೇತರಿಕೆ ಕಂಡುಬಂದಿದೆ. ಮಂಪರು ಔಷಧಿ ಪ್ರಮಾಣ ಕಡಿಮೆ ಮಾಡಲಾಗಿದೆ’ ಎಂದು ತಿಳಿಸಿದರು.

 ‘ರಕ್ತದಲ್ಲಿನ ಕ್ರಿಯಾಟಿನ್‌ ಅಂಶವು  1.4 ಮಿ.ಗ್ರಾಂ ಗೆ ಇಳಿದಿದ್ದು, 1.3 ಮಿ.­ಗ್ರಾಂ ಬಂದರೆ ಸಾಮಾನ್ಯ ಸ್ಥಿತಿಯನ್ನು ತಲು­ಪ­ಲಿದೆ. ಇದರಿಂದ ಮೂತ್ರ­ಪಿಂಡಗಳ ಕಾರ್ಯನಿರ್ವಹಣೆ ಸರಾಗ­ವಾಗ­ಲಿದೆ. ಇನ್ನೂ 24 ಗಂಟೆಗಳ ಒಳಗೆ ಕೃತಕ ಉಸಿರಾಟ ಸಾಧನವನ್ನು  ತೆಗೆ­ಯಲು ನಿರ್ಧರಿಸಿದ್ದೇವೆ’ ಎಂದರು. ಅರಿವಳಿಕೆ ತಜ್ಞ ಡಾ.ಅಜಯ್‌ರಾವ್‌, ‘ಆರೋಗ್ಯ ಸುಧಾ­ರಣೆ­ಯಾದ ಹಿನ್ನೆಲೆ­ಯಲ್ಲಿ ಕುಟುಂಬದ ಸದಸ್ಯರು ಸಮಾ­­ಧಾನ ವ್ಯಕ್ತಪಡಿಸಿದ್ದಾರೆ’ ಎಂದರು.

ಗಣ್ಯರ ದಂಡು: ವಿಧಾನಸಭೆಯ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ನಟಿ ಮಾಲಾಶ್ರೀ,  ನಿರ್ಮಾಪಕ ರಾಮು, ನಟ ದಿಗಂತ್‌, ಶಾಸಕ ಪುಟ್ಟಣ್ಣಯ್ಯ,  ನಿರ್ಮಾಪಕಿ    ವಿಜಯಲಕ್ಷ್ಮಿ ಸಿಂಗ್‌, ಸಿ.ಪಿ.­ಯೋಗೀ­ಶ್ವರ, ಆದಿಚುಂಚನಗಿರಿ ಮಠದ ನಿರ್ಮ­ಲಾ­ನಂದ ಸ್ವಾಮೀಜಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಸ್ಪತ್ರೆಗೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.