ADVERTISEMENT

ನಳನಳಿಸುತ್ತಿರುವ ಜಾಲರಿ..

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 19:30 IST
Last Updated 2 ಮಾರ್ಚ್ 2011, 19:30 IST
ನಳನಳಿಸುತ್ತಿರುವ ಜಾಲರಿ..
ನಳನಳಿಸುತ್ತಿರುವ ಜಾಲರಿ..   

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮಾತ್ರ ಕಂಡು ಬರುವ ‘ಜಾಲರಿ’ ಮರ ಈಗ ತನ್ನ ಸುವಾಸಿತ ಹೂಗಳ ಸುಗಂಧದಿಂದ ನಳನಳಿಸುತ್ತಿದೆ.

ವೈಜ್ಞಾನಿಕವಾಗಿ ಶೋರಿಯಾ ಟಲುರಾ ಎಂದು ಹೆಸರಿಸಲಾದ ಈ ಮರವು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣೆ ಸಂಘಟನೆಯ ಕೆಂಪು ಪಟ್ಟಿಯಲ್ಲಿ ಈ ಮರವು ಸ್ಥಾನ ಪಡೆದಿದ್ದು, ನಗರದ ನಿರಂತರ ‘ಅಭಿವೃದ್ಧಿ’ಯಿಂದಾಗಿ ಅಳಿವಿನಂಚಿಗೆ ತಲುಪಿದೆ. ಆದರೆ ಜಾಲರಿ ಮರವು ಈಗ ಹಸಿರನ್ನು ಮೈಮೇಲೆ ಹೊದ್ದು ನಿಂತಿದೆ.

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಐಎನ್‌ಸಿಇಆರ್‌ಟಿ) ಅಧ್ಯಕ್ಷ ಅ.ನ.ಯಲ್ಲಪ್ಪರೆಡ್ಡಿ ಅವರು ಬುಧವಾರ ಕೆಲವೇ ಕೆಲವು ಮರಗಳಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಮಾಧ್ಯಮದವರನ್ನು ಕರೆದೊಯ್ದು ಈ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ ಅವರು, ಈ ಮರವು ಇಲ್ಲಿಯದೇ ಆಗಿರುವುದರಿಂದ ಇದನ್ನು ‘ಬೆಂಗಳೂರಿನ ಹೆಮ್ಮೆ’ ಎಂದು ಘೋಷಿಸುವಂತೆ ಒತ್ತಾಯಿಸಿದರು.

ಐಎನ್‌ಸಿಇಆರ್‌ಟಿಯು ಲಾಲ್‌ಬಾಗ್, ಕಬ್ಬನ್ ಪಾರ್ಕ್‌ನಲ್ಲಿ ಈ ಸಸಿಗಳನ್ನು ನೆಡಲು ಬಯಸಿದೆ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.