
ಪ್ರಜಾವಾಣಿ ವಾರ್ತೆ
ಬೆಂಗಳೂರು: ಪ್ರತಿ ತಿಂಗಳ ನಾಲ್ಕನೇ ಶನಿವಾರ ಸಾರ್ವತ್ರಿಕ ರಜೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಇದೇ 22ರಿಂದ ಹೊಸ ಆದೇಶ ಜಾರಿಗೆ ಬರಲಿದೆ. 15 ಸಾಂದರ್ಭಿಕ ರಜೆಗಳನ್ನು 10 ದಿನಗಳಿಗೆ ಇಳಿಸಲಾಗಿದೆ.
ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ರಜೆಗಳು ಹೆಚ್ಚಾಗಲಿವೆ.ಅದರ ಬದಲಿಗೆ ಐದು ಸಾಂದರ್ಭಿಕ ರಜೆಗಳು ಕಡಿಮೆಯಾಗಲಿವೆ. ಹಾಗಿದ್ದರೂ ಸರ್ಕಾರಿ ನೌಕರರಿಗೆ ಏಳು ಹೆಚ್ಚುವರಿ ರಜೆಗಳು ಸಿಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.