ADVERTISEMENT

ನಾಳೆಯಿಂದ ಹೆಚ್ಚುವರಿ ಬಸ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 19:30 IST
Last Updated 3 ನವೆಂಬರ್ 2012, 19:30 IST

ಬೆಂಗಳೂರು: `ಬಸ್ ದಿನ~ದ ಅಂಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇದೇ 5ರಂದು (ಸೋಮವಾರ) ನಗರದ ವಿವಿಧ ಕಡೆಗಳಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರ ಆರಂಭಿಸಿದೆ.ಹಳೆ ವಿಮಾನ ನಿಲ್ದಾಣ ರಸ್ತೆ (ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ, ಹಳೆ ಮದ್ರಾಸ್ ರಸ್ತೆ ಮಾರ್ಗ ಸೇರಿದಂತೆ ವಿವಿಧೆಡೆ ಹೆಚ್ಚುವರಿ ಬಸ್ ಸಂಚರಿಸಲಿವೆ.

ಸಂಸ್ಥೆಯ ಘಟಕಗಳಲ್ಲಿ ಲಭ್ಯವಿರುವ ಸುಮಾರು 100 ಹೆಚ್ಚುವರಿ ಬಸ್‌ಗಳನ್ನು ಮಾರ್ಗದಲ್ಲಿ ಹೆಚ್ಚಿನ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇದರಿಂದ 800 ರಷ್ಟು ಹೆಚ್ಚುವರಿ ಸುತ್ತುವಳಿಗಳಲ್ಲಿ ಬಸ್‌ಸಂಚರಿಸಲಿವೆ.
ಹೊಸದಾಗಿ ಮಾರ್ಗ ಸಂಖ್ಯೆ `ಚಕ್ರ-1~ ಪರಿಚಯಿಸಲಾಗಿದೆ. ಬನಶಂಕರಿಯಿಂದ ಮಾನೋಟೈಪ್, ದಯಾನಂದ ಸಾಗರ್ ಕಾಲೇಜು, ಕುಮಾರಸ್ವಾಮಿ ಬಡಾವಣೆ, ಇಸ್ರೊ ಬಡಾವಣೆ, ಕನಕಪುರ ರಸ್ತೆ, ಜರಗನಹಳ್ಳಿ ಕ್ರಾಸ್ ಮಾರ್ಗವಾಗಿ ಮತ್ತೆ ಬನಶಂಕರಿಗೆ ಬಂದು ಸೇರುವಂತೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ.

ಹೊಸಕೆರೆಹಳ್ಳಿಯಿಂದ ಹೊಸಕೆರೆಹಳ್ಳಿ ಕ್ರಾಸ್, ಬನಶಂಕರಿ 1ನೇ ಹಂತ, ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ ಮಾರ್ಗವಾಗಿ ಕೆ.ಆರ್.ಮಾರುಕಟ್ಟೆ ಬಸ್ ನಿಲ್ದಾಣಕ್ಕೆ ಅಟಲ್ ಸಾರಿಗೆ -17 ರಲ್ಲಿ ಹೊಸದಾಗಿ ಬಸ್ ಸಂಚಾರ ಆರಂಭಿಸಲಾಗಿದೆ.

ಚಂದ್ರಾನಗರದಿಂದ ಇಸ್ರೊ ಬಡಾವಣೆ, ಕುಮಾರಸ್ವಾಮಿ ಬಡಾವಣೆ, ದಯಾನಂದ ಸಾಗರ್ ಕಾಲೇಜು, ಬನಶಂಕರಿ, ಮಹಿಳಾ ಸಮಾಜ ಮಾರ್ಗವಾಗಿ ಕೆ.ಆರ್.ಮಾರುಕಟ್ಟೆ ಬಸ್ ನಿಲ್ದಾಣಕ್ಕೆ ಅಟಲ್ ಸಾರಿಗೆ -18 ರಲ್ಲಿ ಬಸ್ ಸಂಚಾರ ಆರಂಭವಾಗಿದೆ.

ಕದಿರೇನಹಳ್ಳಿ ಪಾರ್ಕ್‌ನಿಂದ ಮಾನೋಟೈಪ್, ಎಂ.ಎಂ.ಇಂಡಸ್ಟ್ರೀಸ್, ಮಹಿಳಾ ಸಮಾಜ ಮಾರ್ಗವಾಗಿ ಕೆ.ಆರ್.ಮಾರುಕಟ್ಟೆ ಬಸ್ ನಿಲ್ದಾಣಕ್ಕೆ ಅಟಲ್ ಸಾರಿಗೆ - 19 ರಲ್ಲಿ ಎರಡು ಬಸ್ ಸಂಚಾರವನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ಶಿವಾಜಿನಗರದಿಂದ ಹೆಬ್ಬಾಳ, ಯಲಹಂಕ, ಹುಣಸಮಾರನಹಳ್ಳಿ ಮಾರ್ಗವಾಗಿ ಹೊಸಹಳ್ಳಿಗೆ ಮಾರ್ಗ ಸಂಖ್ಯೆ - `282 ಎಚ್~ ನಲ್ಲಿ ಒಂದು ಬಸ್ ಮತ್ತು ಶಿವಾಜಿನಗರದಿಂದ ಥಣಿಸಂದ್ರ, ರೇವಾ ಕಾಲೇಜು, ಸಾತನೂರು ಮಾರ್ಗವಾಗಿ ಬಾಗಲೂರಿಗೆ ಮಾರ್ಗ ಸಂಖ್ಯೆ - `290 ಜಡ್~ ನಲ್ಲಿ ಹೊಸದಾಗಿ ಎರಡು ಬಸ್ ಸಂಚಾರ ಆರಂಭಿಸಲಾಗಿದೆ.

ಯಲಹಂಕದಿಂದ ಮಾರಸಂದ್ರ, ಗೌಡರ ಹಳ್ಳಿ, ಅರಳುಮಲ್ಲಿಗೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಮಾರ್ಗ ಸಂಖ್ಯೆ - `285 ಎಂಪಿ~ ನಲ್ಲಿ ಒಂದು ಮತ್ತು ಕೆ.ಆರ್.ಮಾರುಕಟ್ಟೆಯಿಂದ ನಾಯಂಡಹಳ್ಳಿ, ರಾಜರಾಜೇಶ್ವರಿ ದೇವಸ್ಥಾನ, ಹಲಗೆವಡೇರಹಳ್ಳಿ, ಕೃಷ್ಣಗಾರ್ಡನ್ ಮಾರ್ಗವಾಗಿ ಕಾಂಕಾರ್ಡ್ ಲೇಔಟ್‌ಗೆ ಮಾರ್ಗಸಂಖ್ಯೆ - `225 ಡಿಎ~ ನಲ್ಲಿ ಎರಡು ಬಸ್ ಸಂಚಾರ ಪ್ರಾರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.