ADVERTISEMENT

ನಿಧನ ವಾರ್ತೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 18:30 IST
Last Updated 19 ಆಗಸ್ಟ್ 2012, 18:30 IST

ಕಮಲಮ್ಮ
ಬೆಂಗಳೂರು:
  ನಿವೃತ್ತ ಮುಖ್ಯ ಶಿಕ್ಷಕ ಲೇಟ್ ಚಂದ್ರಶೇಖರ ಶಾಸ್ತ್ರಿ ಅವರ ಪತ್ನಿ ಕಮಲಮ್ಮ (93) ಅವರು ನಗರದ ಅಬ್ಬಿಗೆರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು. ಮೂಲತಃ ಕೋಲಾರ ತಾಲ್ಲೂಕಿನ ಜೋಡಿ ಕೃಷ್ಣಾಪುರದವರಾದ ಕಮಲಮ್ಮನವರಿಗೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.

ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಅಬ್ಬಿಗೆರೆಯ ರುದ್ರ ಭೂಮಿಯಲ್ಲಿ ನೆರವೇರಿತು.

ಬಿ.ಕೆ. ರಾಮಕೃಷ್ಣ
ನೆಲಮಂಗಲ:
ತಾಲ್ಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಬಿ.ಕೆ.ರಾಮಕೃಷ್ಣ (58) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಭಾನುವಾರ ಬಸವನಹಳ್ಳಿಯ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ಅವಿವಾಹಿತರಾಗಿದ್ದ ಅವರು ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನರಸಿಂಹನಾಯಕ್, ಮುಖ್ಯ ಶಿಕ್ಷಕ ಶ್ರೀನಿವಾಸ್, ನೌಕರರ ಸಂಘದ ಎಸ್.ಎಸ್.ಬಿರಾದರ್ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಮೃತರ ಅಂತಿಮ ದರ್ಶನ ಪಡೆದರು.

ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದ ರಾಮಕೃಷ್ಣ ಅವರ ಹುಟ್ಟುಹಬ್ಬದ ದಿನವಾದ ಶನಿವಾರ ವಿದ್ಯಾರ್ಥಿಗಳು ಶುಭ ಹಾರೈಸಲು ಕಾತರರಾಗಿದ್ದರು. ಆದರೆ, ಅವರು ಶಾಲೆಗೆ ಬಾರದಿದ್ದರಿಂದ ನಿರಾಶರಾಗಿದ್ದ ವಿದ್ಯಾರ್ಥಿಗಳು ಮೃತಪಟ್ಟ ಸುದ್ದಿಯನ್ನು ತಿಳಿದು ದುಃಖಿತರಾದರು. ಅಂತಿಮ ಸಂಸ್ಕಾರದಲ್ಲಿ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.