ADVERTISEMENT

ನೇಮಕಾತಿ: ನೋಟಿಸ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:20 IST
Last Updated 4 ಮಾರ್ಚ್ 2014, 19:20 IST

ಬೆಂಗಳೂರು: ಕಿರಿಯ ಸಿವಿಲ್‌ ನ್ಯಾಯಾ­ಧೀಶರ ನೇಮಕಾತಿಯಲ್ಲಿ ಅಂಗ­ವಿಕ­ಲ­ರಿಗೆ ಸೂಕ್ತ ಮೀಸಲಾತಿ ಕಲ್ಪಿಸಿಲ್ಲ ಎಂದು ದೂರಿ ಚಂದ್ರಕಾಂತ್‌ ಎಂಬು­ವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇದರ ವಿಚಾರಣೆ ನಡೆಸಿದ ನ್ಯಾಯ­ಮೂರ್ತಿ ಎ.ಎನ್‌. ವೇಣುಗೋಪಾಲ ಗೌಡ ಅವರು ಕಾನೂನು ಇಲಾಖೆ ಕಾರ್ಯ­ದರ್ಶಿ, ರಾಜ್ಯ ಹೈಕೋರ್ಟ್‌ ರಿಜಿ­­ಸ್ಟ್ರಾರ್‌ ಜನರಲ್ ಅವರಿಗೆ ನೋಟಿಸ್‌ ಜಾರಿಗೆ ಆದೇಶಿಸಿದ್ದಾರೆ.

155 ಸಿವಿಲ್‌ ನ್ಯಾಯಾಧೀಶರ ನೇಮಕಕ್ಕೆ 2011ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ನಿಯಮಗಳ ಅನು­ಸಾರ ನಾಲ್ಕು ಹುದ್ದೆಗಳನ್ನು ಅಂಗವಿಕಲ­ರಿಗೆ ಮೀಸಲಿಡಬೇಕಿತ್ತು. ಆದರೆ ಅದನ್ನು ಪಾಲಿಸಿಲ್ಲ ಎಂದು ದೂರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.