ADVERTISEMENT

ನೈತಿಕ ಮೌಲ್ಯವಿಲ್ಲದ ಶಿಕ್ಷಣ ವ್ಯರ್ಥ

ಎನ್‌ಐಎಎಸ್‌ ನಿರ್ದೇಶಕ ಡಾ. ಬಲದೇವ್ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2016, 19:53 IST
Last Updated 24 ಜನವರಿ 2016, 19:53 IST
5ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳೊಂದಿಗೆ ಬಲದೇವ್ ರಾಜ್, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎ.ಎಚ್. ರಾಮರಾವ್, ಕಾರ್ಯದರ್ಶಿ ಪ್ರೊ.ಎಸ್.ಎನ್. ನಾಗರಾಜ ರೆಡ್ಡಿ, ಖಜಾಂಚಿ ಜಯಚಂದ್ರ ಶೆಟ್ಟಿ, ಪ್ರಾಂಶುಪಾಲ ಡಾ. ಕೆ.ನಾರಪ್ಪ ಇದ್ದಾರೆ

ಬೆಂಗಳೂರು: ಜಯನಗರ ನ್ಯಾಷನಲ್ ಪದವಿ ಕಾಲೇಜಿನ 5ನೇ ಘಟಿಕೋತ್ಸವದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಸಿ.ಎ ಕೋರ್ಸ್‌ ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.

ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ಎನ್‌ಐಎಎಸ್‌) ನಿರ್ದೇಶಕ ಡಾ. ಬಲದೇವ್ ರಾಜ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಆತ್ಮವಿಶ್ವಾಸ, ರಾಷ್ಟ್ರೀಯ ಭಾವನೆ ಬಿತ್ತದ ಶಿಕ್ಷಣ ವ್ಯರ್ಥವಾದದ್ದು. ಸಮಾಜದ ಋಣಭಾರ ತೀರಿಸುವಂತೆ ಪ್ರೇರೇಪಿಸುವ ಶಿಕ್ಷಣ ನೀಡಬೇಕು’ ಎಂದರು.

‘ದೇಸಿ ನೆಲೆಗಟ್ಟಿನ ಮೇಲೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಅನುಕೂಲವಾಗುವ ಗುಣಮಟ್ಟದ ಶಿಕ್ಷಣವನ್ನು ನ್ಯಾಷನಲ್ ಕಾಲೇಜು ಕಳೆದ ಒಂದು ಶತಮಾನದಿಂದ ನೀಡುತ್ತ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.