ADVERTISEMENT

ಪವನ್ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 18:30 IST
Last Updated 11 ಜುಲೈ 2012, 18:30 IST

ಬೆಂಗಳೂರು: ಅಮೆರಿಕದಲ್ಲಿ ಸಾವನ್ನಪ್ಪಿದ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಪವನ್‌ಕುಮಾರ್ ಅವರ ಅಂತ್ಯಕ್ರಿಯೆ ಹೆಬ್ಬಾಳ ವಿದ್ಯುತ್ ಚಿತಾಗಾರದಲ್ಲಿ ಬುಧವಾರ ನಡೆಯಿತು.ಶವವನ್ನು ಆರ್.ಟಿ. ನಗರದಲ್ಲಿನ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪವನ್ ಸಂಬಂಧಿಕರ ಆಕ್ರಂದನದ ಜತೆಗೆ ಆಕ್ರೋಶವೂ ಹೆಚ್ಚಾಗಿತ್ತು.
 
ಆದರೆ, ಪವನ್ ಕೆಲಸ ಮಾಡುತ್ತಿದ್ದ ಕಾಗ್ನಿಜಂಟ್ ಕಂಪೆನಿಯ ಅಧಿಕಾರಿಗಳಾಗಲೀ, ಸಹೋದ್ಯೋಗಿಗಳಾಗಲೀ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ.

`ನ್ಯೂಜೆರ್ಸಿ ಪೊಲೀಸರು ಶವದ ಜತೆ ಮರಣ ದೃಢೀಕರಣ ಪತ್ರವನ್ನು ಕಳುಹಿಸಿದ್ದಾರೆ. ಆದರೆ, ಸಾವಿಗೆ ಕಾರಣವೇನು ಎಂಬ ಬಗ್ಗೆ ಆ ಪತ್ರದಲ್ಲಿ ಯಾವುದೇ ಮಾಹಿತಿ ನಮೂದಿಸಿಲ್ಲ. ಬದಲಿಗೆ ತನಿಖೆ ಪ್ರಗತಿಯಲ್ಲಿದೆ ಎಂದು ಬರೆಯಲಾಗಿದೆ~ ಎಂದು ಪವನ್ ತಂದೆ ಅಂಜಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.