ಬೆಂಗಳೂರು: ಉಪಗ್ರಹ ವಾಹಕ ಪಿಎಸ್‌ಎಲ್‌ವಿ-ಸಿ16 ಅನ್ನು ಏ.20ರಂದು ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಪಗ್ರಹ ಕೇಂದ್ರದಿಂದ ಆಕಾಶಕ್ಕೆ ಉಡಾಯಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ರಿಸೋರ್ಸ್ ಉಪಗ್ರಹ-02, ಯೂಥ್ ಮತ್ತು ಎಕ್ಸ್ ಎಂಬ ಮೂರು ಉಪಗ್ರಹಗಳನ್ನು ಇದು ಹೊತ್ತೊಯ್ಯೊಲಿದೆ ಎಂದು ಅದು ತಿಳಿಸಿದೆ. ಪ್ರಾಥಮಿಕ ಹಂತದ ಉಪಗ್ರಹವಾಗಿರುವ ‘ರಿಸೋರ್ಸ್ ಉಪಗ್ರಹ-02’ ಅನ್ನು ಇಸ್ರೊ ಸಂಸ್ಥೆಯು ತಯಾರಿಸಿದೆ. 1.206 ಕಿ.ಗ್ರಾಂ. ತೂಕ ಹೊಂದಿರುವ ಈ ಉಪಗ್ರಹವು ನೈಸರ್ಗಿಕ ಸಂಪನ್ಮೂಲಗಳ ಅಧ್ಯಯನ ಮತ್ತು ನಿರ್ವಹಣೆಗಾಗಿ ಬಳಕೆಯಾಗಲಿದೆ. 92 ಕಿ.ಗ್ರಾಂ ತೂಕವಿರುವ ‘ಯೂಥ್ ಉಪಗ್ರಹ’ವನ್ನು ರಷ್ಯಾದ ಜೊತೆಗೂಡಿ ಸಿದ್ದಗೊಳಿಸಲಾಗಿದ್ದು, ನಕ್ಷತ್ರ ಹಾಗೂ ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತು ಅಧ್ಯಯನ ನಡೆಸಲು ಸಹಕಾರಿಯಾಗಲಿದೆ. ಎಕ್ಸ್-ಉಪಗ್ರಹವನ್ನು ಸಿಂಗಪುರದ ನಾನ್‌ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯವು ತಯಾರಿಸಿದೆ. 106 ಕಿ.ಗ್ರಾಂ ತೂಕವಿರುವ ಇದು ಸೂಕ್ಷ್ಮ ಉಪಗ್ರಹ ಎಂದು ಇಸ್ರೊ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.