ADVERTISEMENT

ಪಿಯುಸಿ: ಇಂದು ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST

ಬೆಂಗಳೂರು: ಇದೇ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ಫಲಿತಾಂಶ  ಪದವಿಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ  ಶುಕ್ರವಾರ ಮಧ್ಯಾಹ್ನ 4ಕ್ಕೆ (www.pue. kar.ni.in) ಪ್ರಕಟವಾಗಲಿದೆ.

ಮರುಮೌಲ್ಯಮಾಪನದ ಫಲಿತಾಂಶ ಇದೇ 13ರಂದು ಆಯಾ ಕಾಲೇಜುಗಳಿಗೆ ರವಾನೆಯಾಗಲಿದೆ. ಅಲ್ಲದೆ, ಪರಿಷ್ಕರಿಸಿದ ಫಲಿತಾಂಶವು ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೂ ರವಾನೆಯಾಗಲಿದೆ. ಫಲಿತಾಂಶದ ಬಗ್ಗೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವ ಅಗತ್ಯ ಇಲ್ಲ ಎಂದು ಎಂದು ಇಲಾಖೆಯ ನಿರ್ದೇಶಕಿ ವಿ. ರಶ್ಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.