ADVERTISEMENT

‘ಪೆಂಕಾಕ್ ಸಿಲತ್ ಕ್ರೀಡೆಗೆ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಥಾನ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಅಬ್ದುಲ್‌ ರಜಾಕ್‌ ಟೈಲರ್‌,  ಎಸ್‌.ಪಿ.ಜಗದೀಶ್‌, ಜಯಪ್ರಸಾದ್‌, ಚೇತನ್‌, ಮಾರುತಿ ಅವರೊಂದಿಗೆ ಪೆಂಕಾಕ್ ಸಿಲತ್ ಹಾಗೂ ಕರಾಟೆ ಪಟುಗಳು ಇದ್ದರು
ಅಬ್ದುಲ್‌ ರಜಾಕ್‌ ಟೈಲರ್‌, ಎಸ್‌.ಪಿ.ಜಗದೀಶ್‌, ಜಯಪ್ರಸಾದ್‌, ಚೇತನ್‌, ಮಾರುತಿ ಅವರೊಂದಿಗೆ ಪೆಂಕಾಕ್ ಸಿಲತ್ ಹಾಗೂ ಕರಾಟೆ ಪಟುಗಳು ಇದ್ದರು   

ನೆಲಮಂಗಲ: ‘ಪೆಂಕಾಕ್ ಸಿಲತ್ ಭಾರತೀಯ ಮೂಲದ ರಕ್ಷಣಾತ್ಮಕ ಸಮರ ಕಲೆ. ಇದು ಏಷ್ಯಾ ಖಂಡದಾದ್ಯಂತ ಪ್ರಖ್ಯಾತಿ ಪಡೆದಿದೆ’ ಎಂದು ರಾಷ್ಟ್ರೀಯ ಪೆಂಕಾಕ್‌ ಸಿಲತ್‌ ಸಂಸ್ಥೆ ತಾಂತ್ರಿಕ ನಿರ್ದೇಶಕ ಅಬ್ದುಲ್‌ ರಜಾಕ್‌ ಟೈಲರ್‌ ತಿಳಿಸಿದರು.

ಪ್ರಾದೇಶಿಕ ಪೆಂಕಾಕ್‌ ಸಿಲತ್‌ ಸಂಸ್ಥೆಯು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ‘ಒಲಂಪಿಕ್‌ ಕಡೆಗೆ ಪೆಂಕಾಕ್‌ ಸಿಲತ್‌ ನಡಿಗೆ’ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘2018ರಲ್ಲಿ ನಡೆಯುವ 18ನೇ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಪೆಂಕಾಕ್‌ ಸಿಲತ್‌ ಸಮರ ಕಲೆಗೂ ಸ್ಥಾನ ಸಿಕ್ಕಿದೆ. ಒಲಂಪಿಕ್ಸ್‌ನಲ್ಲೂ ಅರ್ಹತೆ ಪಡೆಯುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.