ADVERTISEMENT

ಪೆಟ್ರೋಲ್‌ಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:40 IST
Last Updated 13 ಅಕ್ಟೋಬರ್ 2012, 19:40 IST

ಬೆಂಗಳೂರು: ಅಪೂರ್ವ ಚಂದ್ರ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಪೆಟ್ರೋಲ್ ಬಂಕ್ ಮಾಲೀಕರು ಅ. 15ರಿಂದ ಒಂದು ಪಾಳಿಯಲ್ಲಿ ಕೆಲಸ ಮಾಡಲು ನಿರ್ಧರಿಸಿರುವುದರಿಂದ ವಾಹನ ಸವಾರರು ಪೆಟ್ರೋಲ್ ಖರೀದಿಗೆ ಮುಗಿಬೀಳುತ್ತಿದ್ದ ದೃಶ್ಯ ಶನಿವಾರ ಕಂಡುಬಂತು.

`ಸೋಮವಾರದಿಂದ ಪೆಟ್ರೋಲ್ ಬಂಕ್‌ಗಳು ಬೆಳಿಗ್ಗೆ 9ಗಂಟೆಗೆ ತೆರೆ ಯುತ್ತವೆಂದು ತಿಳಿಯಿತು. ಸೋಮ ವಾರ ಬೆಳಿಗ್ಗೆ ವೇಳೆಗೆ ಪೆಟ್ರೋಲ್ ಖಾಲಿಯಾಗದಿರಲಿ ಎಂದು ಶನಿವಾ ರವೇ ಫುಲ್ ಟ್ಯಾಂಕ್ ಹಾಕಿಸು ತ್ತಿದ್ದೇನೆ~ ಎಂದು ವಿಜಯನಗರದ ನಿವಾಸಿ ನರಹರಿ ಹೇಳಿದರು.

`ತೈಲ ಕಂಪೆನಿಗಳು ಹಾಗೂ ಪೆಟ್ರೋಲ್ ವಿತರಕರ ನಡುವಿನ ಗೊಂದಲದಿಂದ ಜನ ಸಾಮಾನ್ಯರ ಮೇಲೆ ಹೊರೆ ಬೀಳುತ್ತಿದೆ. ಇದು ಜನ ಸಾಮಾನ್ಯರನ್ನು ಬಲಿಯಾಗಿ ಸುವ ತಂತ್ರ~ ಎಂದು ಕೋರಮಂಗಲ ನಿವಾಸಿ ಯೋಗಿತಾ ದೂರಿದರು.

`ನಮ್ಮ ಬೇಡಿಕೆಗಳಿಗೆ ತೈಲ ಕಂಪೆನಿ ಗಳು ಪೂರಕವಾಗಿ ಸ್ಪಂದಿಸದ ಕಾರಣ ಸೋಮವಾರದಿಂದ (ಅ. 15) ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತವೆ~ ಪೆಟ್ರೋಲ್ ವಿತರಕರ ಸಂಘದ ಅಧ್ಯಕ್ಷ ಬಿ.ಆರ್. ರವೀಂದ್ರನಾಥ್ ತಿಳಿಸಿದರು.

`ಪೆಟ್ರೋಲ್ ಬಂಕ್ ವಿತರಕರ ಕಮಿಷನ್ ಹೆಚ್ಚಿಸಬೇಕೆಂದು ಆಗ್ರಹಿಸಿ ಇತ್ತೀಚೆಗೆ ಭಾರತ ಪೆಟ್ರೋಲ್ ವಿತರಕರ ಒಕ್ಕೂಟವು ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ಅ.1 ಮತ್ತು ಅ.2ರಂದು ತೈಲ ಕಂಪೆನಿಗಳಿಂದ ಪೆಟ್ರೋಲ್ ಖರೀದಿ ಮಾಡದೇ ಶಾಂತಿಯುತ ಪ್ರತಿಭಟನೆ ನಡೆಸಿದ್ದೆವು. ಅ.15ರೊಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಬಂಕ್ ನೌಕರರು ಕೇವಲ ಒಂದು ಪಾಳಿಯಲ್ಲಿ ಮಾತ್ರ ಕೆಲಸ ಮಾಡುತ್ತಾರೆ ಎಂದು ಈ ಮುನ್ನೆಚ್ಚರಿಕೆ ನೀಡಿದ್ದೆವು. ಆದರೆ, ತೈಲ ಕಂಪೆನಿಗಳು ನಮ್ಮನ್ನು ಮಾತುಕತೆಗೆ ಕರೆದಿಲ್ಲ. ಹೀಗಾಗಿ ಒಂದು ಪಾಳಿಯ ಕೆಲಸ ಅನಿವಾರ್ಯ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.