ADVERTISEMENT

ಪ್ರತ್ಯೇಕ ಅಪಘಾತ: ವಿದ್ಯಾರ್ಥಿ ಸೇರಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 26 ಜೂನ್ 2012, 19:30 IST
Last Updated 26 ಜೂನ್ 2012, 19:30 IST

ಬೆಂಗಳೂರು: ನಗರದ ಶ್ರೀರಾಂಪುರ ಮತ್ತು ಟೆಲಿಕಾಂ ಲೇಔಟ್ ಬಳಿ ಮಂಗಳವಾರ ಬೆಳಿಗ್ಗೆ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ರೈಲಿಗೆ ಸಿಲುಕಿ ಸತ್ತಿದ್ದಾರೆ.

ರೈಲಿಗೆ ಸಿಲುಕಿ ಸತ್ತಿರುವ ಜಗಜೀವನರಾಂನಗರದ ಟೆಲಿಕಾಂ ಲೇಔಟ್ ಸಮೀಪ ಜಾನ್ಸನ್ ದೀಪಕ್ (21), ನಾಗವಾರದ ಬಳಿ ಇರುವ ಖಾಸಗಿ ಕಾಲೇಜು ಒಂದರಲ್ಲಿ ಬಿ.ಕಾಂ ಓದುತ್ತಿದ್ದ. ಆತ ಲಿಂಗರಾಜಪುರದಲ್ಲಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿಗೆ ಹೋಗುವುದಾಗಿ ಸಂಬಂಧಿಕರಿಗೆ ಹೇಳಿ ಬಂದಿದ್ದ ಜಾನ್ಸನ್, ರೈಲಿಗೆ ಸಿಲುಕಿ ಸತ್ತಿದ್ದಾನೆ. ಸಾವಿಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಮತ್ತೊಂದು ಪ್ರಕರಣ: ಶ್ರೀರಾಂಪುರ ಸಮೀಪದ ಮಹಮಡನ್ ಬ್ಲಾಕ್ ಸೇತುವೆ ಬಳಿ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ವಯಸ್ಸು ಸುಮಾರು 30 ವರ್ಷ. ಆ ವ್ಯಕ್ತಿಯ ರುಂಡ-ಮುಂಡ ಬೇರೆ ಬೇರೆಯಾಗಿದೆ ಮತ್ತು ದೇಹ ಸಹ ಸಂಪೂರ್ಣ ಛಿದ್ರವಾಗಿದೆ. ಇದರಿಂದಾಗಿ ಆತನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ರೈಲು ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.